ಶ್ರೀರಂಗಮ್, ಶ್ರೀಮುಷ್ಣಮ್, ವೆಂಕಟಾಚಲ, ಶಾಲಗ್ರಾಮಕ್ಷೇತ್ರ (ದಾಮೋದರಕುಂಡ), ನೈಮಿಷಾರಣ್ಯ, ತೋತಾದ್ರಿ, ಪುಷ್ಕರ ಮತ್ತು ಬದರಿಕಾಶ್ರಮ ಇವು ಭೂಮಿಯಲ್ಲಿನ ಅಷ್ಟವೈಕುಂಠಗಳೆಂದು ಪ್ರಖ್ಯಾತಿ ಪಡೆದಿವೆ. ಇವುಗಳಲ್ಲಿ ಒಂದಾದ ದೇವಭೂಮಿ ಎಂದೇ ಪ್ರಖ್ಯಾತವಾಗಿರುವ ಹಿಮಾಲಯದಲ್ಲಿರುವ ಬದರಿಕಾಶ್ರಮ ಹಿಂದುಗಳಿಗೆ ಪವಿತ್ರಧಾಮಗಲ್ಲಿ ಒಂದು. ಗಂಡಕೀಕ್ಷೇತ್ರದಲ್ಲಿರುವ ದಾಮೋದರಕುಂಡದನಂತರ ಅತ್ಯಂತದುರ್ಗಮ ಅಗಮ್ಯ ಕ್ಷೇತ್ರಗಳಲ್ಲಿ ಬದರಿಕಾಶ್ರಮಧಾಮ ಭಗವಾನ್ ಶ್ರೀಮಹಾವಿಷ್ಣುವಿನ ವಾಸಸ್ಥಾನ. ವರ್ಷದ ಷಟ್ಮಾಸಗಳಕಾಲ ಮಾತ್ರ ದರ್ಶನಕ್ಕೆ ಲಭ್ಯವಿರುವ ಈ ಕ್ಷೇತ್ರ ಭಾರತದ ಉತ್ತರದ ತುತ್ತತುದಿಯಲ್ಲಿರುವ ಹಿಮಾಲಯದ ಹಿಮಾಚ್ಚಾದಿತ ಪ್ರದೇಶಗಳಲ್ಲಿದೆ. ಹರಿದ್ವಾರ ಹಿಮಾಲಯದ ಹೆಬ್ಬಾಗಿಲು ಎನಿಸಿದ್ದು ಅಲ್ಲಿಂದ ಮುಂದೆ ಸಾಗುವಾಗ ಈ ದೇವಭೂಮಿಯಲ್ಲಿ ಮಹಾಭಾರತ, ರಾಮಾಯಣದ ಅಸ್ತಿತ್ವವನ್ನು ಸಾರುವ ಒಂದೊಂದೆ ಕುರುಹುಗಳು ಮಾರ್ಗಮಧ್ಯ ನೋಡಲು ಸಿಗುತ್ತಿದ್ದು ನಾಸ್ತಿಕರನ್ನು ಆಸ್ತಿಕರನ್ನಾಗಿ ಮಾಡುವವು. ಪೌರಾಣಿಕ ಕಥಾಭಾಗಕ್ಕೂ ಅದರಲ್ಲಿ ವರ್ಣಿತ ಭೌಗೋಳಿಕ ಸ್ಥಳಗಳಸಾಮ್ಯತೆ ಹಿಂದೆ ನಡೆದಿರುವ ಘಟನೆಯು ಒಂದು ಕಾಲ್ಪನಿಕ ಕಥೆ್ಯಲ್ಲದೆ ಇತಿಹಾಸವೆಂಬುದನ್ನು ಪುಷ್ಟಿಕರಿಸುತ್ತವೆ. ಮಹಾಭಾರತ ಕಾಲದ ಪಾಂಡವರ ಜನ್ಮಸ್ಥಾನವಾದ ಪಾಂಡುಕೇಶ್ವರ, ಬಲರಾಮನ ತೀರ್ಥಯಾತ್ರೆ, ಚಿರಂಚೀವಿ ಹನುಮಂತ ಮತ್ತು ಭೀಮರ ಸೌಗಂಧಿಕ ಪುಷ್ಪದ ಪ್ರಯುಕ್ತ ಭೇಟಿ, ಕುಬೇರನ ನಂದನವನ (ಫೂಲೊಕಾಘಾಟಿ), ಪಾಂಡವರ ಸ್ವಗರ್ಾರೋಹಣ, ಶಿವನು ಪಾರ್ವತಿಯನ್ನು ಮದುವೆಯಾದ ತ್ರಿಯುಗಿನಾರಾಯಣ ಮಂದಿರ ಇತ್ಯಾದಿ ಸ್ಥಳಗಳು ಇಲ್ಲಿಯ ಪರಿಸರದಲ್ಲಿವೆ.
ಬದರಿಕಾಶ್ರಮ : ಪೂರ್ವದಲ್ಲಿ ಶ್ರೀವಿಷ್ಣುವು ಈ ಭೂಮಿಯಲ್ಲಿ ತಪಸ್ಸನ್ನಾಚರಿಸಲು ನೆಲೆನಿಂತಾಗ ಶ್ರೀಲಕ್ಷ್ಮೀದೇವಿಯು ತನ್ನ ಪತಿಯನ್ನನುಸರಿಸಿ ಇಲ್ಲಿ ಬಂದು ಅವನ ತಪಸ್ಸಿಗೆ ಭಂಗಬಾರದಂತೆ ಮಳೆಗಾಳಿ ಬಿಸಿಲಿನಿಂದ ರಕ್ಷಣೆನ್ನಿಯಲು ಬದರಿವೃಕ್ಷವಾಗಿ ಆಸರೆಯಾದಳು. ಅವಳ ಈ ಸೇವಾಕಾರ್ಯಕ್ಕೆ ಮೆಚ್ಚಿದ ಶ್ರೀವಿಷ್ಣುವು ಈ ಕ್ಷೇತ್ರವನ್ನು ಬದರಿಕಾಶ್ರಮವೆಂದು ಹೆಸರಿಸಿದನು. ಸರ್ವನಿಯಾಮಕ ಶ್ರೀ ವಿಷ್ಣುವಿಗೂ ರಕ್ಷಣೆ ಬೇಕೆ ? ಖಂಡಿತ ಬೇಡ ಲೌಕಿಕರಿಗೆ ಒಂದು ಉಪದೇಶ ಒಂದು ಉಧಾಹರಣೆ ಈ ಮೂಲಕ ಒಂದು ಸಂದೇಶ ಭೂವಾಸಿಗಳಿಗೆ. ಇಂತಹ ಲಕ್ಷ್ಮೀನಾರಾಯಣರ ನಿತ್ಯಸನ್ನಿಧಿಯ ಪವಿತ್ರಭೂಮಿ ಬದರಿಕಾಶ್ರಮ. ಪಕ್ಕದಲ್ಲಿರುವ ಚಿತ್ರ ಬದರಿನಾರಾಯಣನ ಪ್ರತಿಕೃತಿಯ ಬೆಳ್ಳಿಯ ಮಾದರಿ.
ಸ್ಥಾನಿಕ ಬ್ರಾಹ್ಮಣರಮೂಲಕ ಜನಜನಿತವಾಗಿರುವ ಪೌರಾಣಿಕ ಕಥೆಯಂತೆ ಹಿಂದೆ ದಂಡೋದ್ಭವನೆಂಬ ರಕ್ಕಸನು ಸೂರ್ಯನನ್ನು ಕುರಿತು ತಪನ್ನಾಚರಿಸಿ ಒಂದುಸಹಸ್ರಕವಚ ನೀಡುವಂತೆ ವರಪಡೆದನು. ಪ್ರತಿಕವಚ ಭೇಧಿಸುವವ್ಯಕ್ತಿ ಒಂದು ಸಾವಿರ ವರ್ಷತಪಸ್ಸುಮಾಡಿರಬೇಕೆಂದು ಕೋರಿಕೊಂಡನು. ಸೂರ್ಯದೇವನು ನೀಡಿದ ಈ ವರದಿಂದ ಮದೋನ್ಮತ್ತನಾಗಿ ಲೋಕಪೀಡಕನಾಗಿದ್ದನು. ಈಗಿನ ಬದರಿನಾಥದಲ್ಲಿ ಧರ್ಮ ಮತ್ತು ಮೂರ್ತಿ ಎಂಬ ಋಷಿದಂಪತಿಗಳಿಗೆ ಶ್ರೀಮನ್ನಾರಾಯಣನು ನರನಾರಾಯಣನಾಗಿ ಅವತರಿಸಿದನು. ಅವರು ತಪಸ್ಸಾಚರಿಸಲು ಎರಡು ಪ್ರತ್ಯೇಕ ಪರ್ವತಗಳಲ್ಲಿ ಕುಳಿತರು. ಅಲಕನಂದಾ ನದಿತೀರದ ಈ ಎರಡು ಪರ್ವತಗಳೇ ನರನಾರಾಯಣ ಪರ್ವತಗಳು. ಈ ಪರ್ವತಗಳಲ್ಲಿ ಯಾರೊ ಬಲಿಷ್ಟತಾಪಸಿಗಳಿದ್ದಾರೆಂದು ತಿಳಿದ ಸಹಸ್ರಕವಚ ರಕ್ಕಸನು ಅವರಿಗೆ ಯುದ್ದಕ್ಕೆ ಆಹ್ವ್ವಾನಿಸಿದನು. ಈ ಯುದ್ದದಲ್ಲಿ ನರನಾರಾಯಣರು ಒಬ್ಬರು ಒಂದುವರ್ಷತಪಸ್ಸುಮಾಡುವದು ಇನ್ನೊಬ್ಬರು ಯುದ್ಧಮಾಡುವದು ಹೀಗೆ ಅವನ 999 ಕವಚಗಳನ್ನು ಭೇಧಿಸಿದರು. ಈ ಕ್ಷೇತ್ರದಲ್ಲಿ ಯಾವಕಾರ್ಯಮಾಡಿದರು ಅದಕ್ಕೆ ಸಹಸ್ರಪಟ್ಟು ಪ್ರತಿಫಲ ಎಂಬುದಾಗಿ ಪ್ರತೀತಿಇದೆ. ಆದ್ದರಿಂದ ಇಲ್ಲಿ ಒಂದು ವರ್ಷದ ತಪಸ್ಸು ಸಾವಿರಪಟ್ಟು ಫಲನೀಡುತ್ತಿತ್ತು. ಕೊನೆಯ ಒಂದು ಕವಚವಿರುವಾಗ ಓಡಿಹೋಗಿ ಸೂರ್ಯನಲ್ಲಿ ರಕ್ಷಣೆಪಡೆದನು. ಈ ಸಹಸ್ರಕವಚನೆ ಮುಂದೆ ದ್ವಾಪರದಲ್ಲಿ ಸೂರ್ಯಪುತ್ರ ಕರ್ಣನಾಗಿ ಹುಟ್ಟಿ ನರನಾರಾಯಣರೆ ಕೃಷ್ಣಾರ್ಜುನರಾಗಿ ಅವನನ್ನು ನಿಗ್ರಹಿಸಿದರು.
ಗೌಡ ಸಾರಸ್ವತ ಬ್ರಾಹ್ಮಣ ಮಠದ ಉದಯ : ಈ ದೇವಭೂಮಿ ಗೌಡಸಾರಸ್ವತ ಬ್ರಾಹ್ಮಣ ಸಮಾಜದ ಯತಿಪರಂಪರೆಯ ಉಗಮಸ್ಥಾನವೂ ಹೌದು. ಕ್ರಿ.ಶ. 1475ರ ಸಮಯ. ಗೌಡಸಾರಸ್ವತ ಸಮಾಜದ ಭಾಗ್ಯದದಿವಸವೆಂದರೇನೆ ಸರಿಯಾದಿತು. ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಆದ್ಯಗುರುವರ್ಯರಾದ ಶ್ರೀಮದ್ ನಾರಾಯಣ ತೀರ್ಥರಿಗೆ ಈ ಪವಿತ್ರಧಾಮದಲ್ಲಿ ಆಶ್ರಮದೀಕ್ಷೆ ನೀಡಿ ಈ ಸ್ಥಾನದ ನೆನೆಪಿಗೆ ಶ್ರೀನಾರಾಯಣ ತೀರ್ಥರೆಂದು ನಾಮಾಭಿದಾನ ನೀಡಿ ಶ್ರೀರಾಮಚಂದ್ರ ದೇವರ ಧಾತುವಿಗ್ರಹವನ್ನು ಫಲಿಮಾರು ಮಠದ ಶ್ರೀ ರಾಮಚಂದ್ರ ತೀರ್ಥರು ನೀಡಿದ್ದು ಈಗ ಇತಿಹಾಸ. ಈ ಕ್ಷೇತ್ರದ ಮಹಿಮೆಯಂತೆ ಇಲ್ಲಿಯ ಸತ್ಕಾರ್ಯವು ಸಹಸ್ರಪಟ್ಟಾಗಿ ವೃದ್ಧಿಯಾಗುವಂತೆ ಶ್ರೀ ಮಠವು ದಿನದಿಂದ ದಿನಕ್ಕೆ ಬೆಳೆಯುತ್ತಾ ಈಗ ಹೆಮ್ಮರವಾಗಿ ಬೆಳೆದಿದೆ. ಕೆಲವು ಸತ್ಕಾರ್ಯಗಳು ದೈವಸಂಕಲ್ಪದಂತೆ ನೆರವೇರಿ ಭೂಲೋಕದಲ್ಲಿ ಧರ್ಮಪ್ರಚಾರಕ್ಕೆ ದೇವರಿಂದ ನಿಯಾಮಕರಾಗಿ ಅವರ ಅನುಗ್ರದಿಂದ ಪೋಷಿಸಿ ಸಾಮಾನ್ಯರ ಮಾರ್ಗದರ್ಶನಕ್ಕೆ ದಾರಿದೀಪವಾಗಿದೆ.
ಪರಂಪರೆಯ ಯತಿವರ್ಯರ ಬದರಿಕಾಶ್ರಮಯಾತ್ರೆ : ಬದರಿಕಾಶ್ರಮ ಮಠಪರಂಪರೆಗೆ ಎರಡು ರೀತಿಯಿಂದ ಪ್ರಾಮುಖ್ಯತೆ ಪಡೆದಿದೆ. ಒಂದನೆಯದಾಗಿ ಅಷ್ಟವೈಕುಂಠಗಳಲ್ಲಿ ಒಂದು ಎರಡನೆಯದಾಗಿ ಶ್ರೀ ಸಂಸ್ಥಾನ ಉಗಮಸ್ಥಾನವೂ ಹೌದು. ಆದ್ದರಿಂದಲೆ ಶ್ರೀ ಸಂಸ್ಥಾನದ ಯತಿಗಳು ಬದರಿಯಾತ್ರೆಗೆ ಬರುತ್ತಾರೆ. ಪರಂಪರೆಯ ಮೂರನೆಯ ಯತಿವರ್ಯರಾದ ಶ್ರೀಮದ್ ಜೀವೋತ್ತಮ ತೀರ್ಥರು ಕೈಗೊಂಡ ಆಸೇತು ಹಿಮಾಚಲ ಯಾತ್ರೆಯಲ್ಲಿ ಹಿಮಾಲಯದ ವಿವಿಧ ಪುಣ್ಯತಮ ಸ್ಥಳಗಳ ಉಲ್ಲೇಖವಿದ್ದು ಅದರಲ್ಲಿ ಬದರಿನಾಥಕೂಡ ಒಂದು. ಕ್ರಿ.ಶ. 1550 ರಲ್ಲಿ ಅವರುಕೈಗೊಂಡ ದಾಮೋದರಕುಂಡ ಮತ್ತು ಬದರಿನಾಥ ಯಾತ್ರೆಯ ಉಲ್ಲೇಖ ತೀರ್ಥವಳ ಕಾವ್ಯದಲ್ಲಿ ಉಲ್ಲೇಖವಾಗಿದೆ. ನಂತರದ ಶ್ರೀಮದ್ ಆನಂದ ತೀರ್ಥರು (17), ಪೂರ್ಣಪ್ರಜ್ಞತೀರ್ಥರು (18). ಶ್ರೀಮದ್ ಇಂದಿರಾಕಾಂತರು(20) 1913 ರಲ್ಲಿ ಮಾಡಿದ ಬದರಿಯಾತ್ರೆ ಮಠದಲ್ಲಿನ ಅವರ ದಿನವಹಿಯಲ್ಲಿ ವಿವರವಾದ ಉಲ್ಲೇಖವಿದೆ. ಬದರಿನಾಥ ಮಠಪರಂಪರೆಯ ಯತಿವರ್ಯರಿಗೆ ಪವಿತ್ರ ತೀರ್ಥಸ್ಥಾನವಾಗಿದೆ.
ಯಾತ್ರೆಗೆ ಪ್ರೇರಣೆ : ಶ್ರೀಮದ್ ವಿದ್ಯಾಧಿರಾಜ ತೀರ್ಥರು 74ರ ಈ ಇಳಿವಯಸ್ಸಿನಲ್ಲಿ ಯಾಕೆ ಹಿಮಾಲಯದಲ್ಲಿ ಚಾತುಮರ್ಾಸ ಕೈಗೊಂಡುರು ಎಂಬುದು ಎಲ್ಲರಿಗೆ ಯಕ್ಷಪ್ರಶ್ನೆಯಾಗಿ ಕಾಡಿತ್ತು. ಅದಕ್ಕೆ ಉತ್ತರ ಬದರಿನಾಥ ಚಾತುಮರ್ಾಸ ವ್ರತಸಮಾಪ್ತಿಯ ಸಮಾರೋಪ ಸಭೆಯಲ್ಲಿ ಉತ್ತರವನ್ನು ನೀಡಿದರು. ತಮ್ಮ ಗುರುವರ್ಯರಾದ ಶ್ರೀ ದ್ವಾರಕಾನಾಥ ತೀರ್ಥರಿಗೆ ಬದರಿಕಾಶ್ರಮ ಸಂದರ್ಶನ ಮಾಡುವ ಬಯಕೆಯಿತ್ತು. ಸಂಸ್ಥಾನದ ಆಡಳಿದ ದಿನನಿತ್ಯದ ಕಲಾಪಗಳ ಒತ್ತಡದ ಕಾರ್ಯಬಾಹುಳ್ಯದಿಂದ ಅದು ಕನಸಾಗಿಯೇ ಉಳಿಯಿತು. ಅವರ ಮನದಬಯಕೆಯನ್ನು ಅರಿತಿದ್ದ ಶ್ರೀಗಳವರು ಅವರ ಜನ್ಮಶತಾಬ್ಧಿಯ ಸುಸಂದರ್ಭದಲ್ಲಿ ಶಿಷ್ಯಸಹಿತರಾಗಿ ಬದರಿಕಾಶ್ರಮದ ಚಾತುಮರ್ಾಸ ಮಾಡುವ ಸಂಕಲ್ಪಮಾಡಿ ಅವರ ಇಚ್ಚೆಯನ್ನು ಪೂರೈಸುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟರು. ಇದಕ್ಕೆ ಪೂರಕವಾಗಿ ಸುಮಾರು ಆರು ತಿಂಗಳ ಹಿಂದೆ ಒಂದು ದಿನ ಬ್ರಾಹ್ಮಿಮುಹೂರ್ತದಲ್ಲಿ ಶ್ರೀಗಳವರಿಗೆ ಬದರಿಯಾತ್ರೆಮಾಡುವಂತೆ ಆಜ್ಞೆಯಾಯಿತು. ಅದನ್ನೆ ಅಂದಿನ ದಿನಾಂಕ ನಮೂದಿಸಿ ಒಂದು ಕಾಗದದಲ್ಲಿ ಬರೆದು ಸ್ಥಳವನ್ನು ತಿಳಿಯಪಡಿಸದೆ ಆಪ್ತವರ್ಗಕ್ಕೆ ತಿಳಿಯಪಡಿಸಿದರು. ಇದು ಶ್ರೀರಾಮದೇವ ವೀರವಿಟ್ಠಲದೇವರ ಆಜ್ಞೆಯಾಗಿತ್ತು.
ಇದಂ ಪ್ರಥಮರು : ವೈಷ್ಣವ ಸಂಪ್ರದಾಯದಲ್ಲಿ 24 ಮಠಪರಂಪರೆಯಿದ್ದು ಅದರಲ್ಲಿ ಈಗಾಗಲೆ 650ಕ್ಕೂ ಅಧಿಕ ಯತಿವರ್ಯರು ಪೀಠಾರೋಹಣ ಮಾಡಿದ್ದು ಇವರಲ್ಲಿ ಬದರಿಯಾತ್ರೆಮಾಡಿದವರು ವಿರಳ ಸಂಖ್ಯೆಯಲ್ಲಿದ್ದು ಅದರಲ್ಲೂ ಬದರಿಯಲ್ಲಿ ಚಾತುರ್ಮಾಸ ಮಾಡಿದವರು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಶ್ರೀ ವಿದ್ಯಾಧಿರಾಜ ತೀರ್ಥರು ಪ್ರಪ್ರಥಮರು ಎಂಬುದು ಇತಿಹಾಸದ ಪುಟಗಳಲ್ಲಿ ಸಾರ್ವಕಾಲಿಕ ದಾಖಲೆಯಾಗಿ ಉಳಿದಿದೆ. ಅದೂ ತಮ್ಮ ವಯೋಮಾನದ 74ರ ಇಳಿವಯಸ್ಸಿನಲ್ಲಿ 2019ರಲ್ಲಿ ತಮ್ಮ 24ರ ಎಳೆವೆಯ ಶಿಷ್ಯರೊಂದಿಗೆ ಎರಡನೆ ಚಾತುರ್ಮಾಸ ಮಾಡಿದ್ದೂಕೂಡ ಒಂದು ಅಮೋಘದಾಖಲೆಯಾಗಿದೆ. ಇಂತಹ ಇಳಿವಯಸ್ಸಿನಲ್ಲಿ ಈಬಗೆಯ ಸಾಹಸಕ್ಕೆ ಕೈಹಾಕುವದು ದೈವಪ್ರೇರಣೆ ಮತ್ತು ದೈವಾನುಗ್ರಹದಿಂದ ಮಾತ್ರಸಾದ್ಯ. ರಕ್ತಹೆಪ್ಪುಗಟ್ಟಿಸುವ ಚಳಿ, ದುರ್ಗಮಪರ್ವತದ ದಾರಿ, ಪ್ರಾಣವಾಯುವಿನ ಕೊರತೆ, ಶುಷ್ಕವಾತಾವರಣ, ವರ್ಷಋತುವಿನ ಕಾಲದ ಮಳೆಯಿಂದ ವಿರಳಜನಸಂಚಾರ, ಪದೆಪದೆ ಭೂಕುಸಿತದಿಂದ ಚಕ್ರವ್ಯೂಹದಲ್ಲಿ ಸಿಕ್ಕಿಕೊಳ್ಳುವ ಭಯ. ಇವೆಲ್ಲರ ನಡುವೆಯೂ ತಮ್ಮ ಗುರುವರ್ಯರ ಇಚ್ಚೆಯನ್ನು ಪೂರೈಸುವ ದೃಢನಿಧರ್ಾರ ಈ ಎಲ್ಲ ಅಡೆತಡೆಗಳನ್ನು ಮೆಟ್ಟಿನಿಂತಿದೆ. ಅಲ್ಲದೆ ಈ ಸತ್ಕಾರ್ಯಕ್ಕೆ ದೈವಬಲವೂ ಇರುವದಕ್ಕೆ ನಿರ್ವಿಘ್ನತೆಯಿಂದ ಚಾತುರ್ಮಾಸದ ಸಂಪೂರ್ಣತೆಯು ಸಾಕ್ಷಿಯಾಗಿದೆ.
ಪೂರ್ವಸಿದ್ಧತೆ : ಬದರಿಕಾಶ್ರಮದಲ್ಲಿನ ಚಾತುಮರ್ಾಸ ಇತರ ಸ್ಥಳಗಳಂತೆ ಸುಲಭಸಾಧ್ಯವಲ್ಲ. ಈ ಕಾರ್ಯಕ್ಕೆ ನಿಖರ ಕಾರ್ಯಸೂಚಿ, ಉತ್ತಮ ಸದೃಢ ಯುವಜನರರಿಂದ ಕೂಡಿದ ತಂಡ, ಪರಿಚಾರಕವರ್ಗ, ಬಂದ ಭಕ್ತಜನರ ಆತಿಥ್ಯಕ್ಕೆ ಸ್ಪಂದಿಸುವ ಅಡಿಗೆಯವರು, ಕಾರ್ಯಕರ್ತರು. ಪ್ರದಿನ ಬೇಕಾಗುವ ತುಳಸಿ, ಹೂ ಮುಂತಾದ ಪೂಜಾಸಾಮಗ್ರಿ, ವೈದ್ಯಕೀಯ ಸಾಮಗ್ರಿ, ದಿನಸಿ, ವಾಸ್ತವ್ಯದ ವ್ಯವಸ್ಥೆ, ಪ್ರಯಾಣದ ಮಾಹಿತಿ ಹೀಗೆ ಒಂದೆ ಎರಡೆ ಪ್ರತಿಯೊಂದನ್ನು ಸೂಕ್ಷಮಾಗಿ ಗಮನಿಸಿ ಪೂರ್ವಸಿದ್ಧತೆ ಮಾಡಿಕೊಳ್ಳಬೆಕು. ಒಮ್ಮೆ ವಷರ್ಾಋತು ಪ್ರ್ರಾರಂಭವಾಗಿ ಭೂಕುಸಿತಕೊಂಡರೆ ಬದರಿನಾಥ ಇತರ ಜನವಸತಿಯಿಂದ ದೂರವಾಗಿ ಫೊನ, ಮೊಬೈಲ್, ವಾಹನ ಇತ್ಯಾದಿಯಾಗಿ ಸರ್ವರೀತಿಯಿಂದ ಜನಸಂಪರ್ಕದಿಂದ ದೂರವಾಗುತ್ತದೆ. ಆದರೂ ಕಾಲಕಾಲಕ್ಕೆ ನಡೆಯುವ ನಿತ್ಯನೈಮಿತ್ತಿಕ ಪೂಜಾಕಾರ್ಯಗಳು, ಹಬ್ಬಹರಿದಿನಗಳು ನಡೆಯಲೇ ಬೇಕು. ಇಲ್ಲಿ ಬಂದವರು ಇದ್ದಸ್ಥಳದಲ್ಲಿಯೆ ಇರುವಂತಾಗುತ್ತದೆ. ನಮ್ಮ ಪ್ರಯಾಣದೆ ಯೋಜನೆ ದೈವಾನುಗ್ರದ ಮೇಲೆ ಅವಲಂಬಿತವಾಗಿರುತ್ತದೆ. ನಮ್ಮಲ್ಲಿಯ ಸಂಪತ್ತು, ದೇಹಧಾಢ್ಯತೆ, ಜನಬಲ, ವಾಹನ ಯಾವದೂ ಕಾರ್ಯಕ್ಕೆ ಬಾರದು. ಹೀಗೆ ಎಷ್ಟೆಬಗೆಯಿಂದ ಪೂರ್ವಯೋಜನೆ ಮಾಡಿದರೂ ದೈವಾನುಗ್ರದಮೇಲೆ ಅವಲಂಬಿತರಾಗಿರಬೇಕು. ಹಿಂದಿಯಲ್ಲಿರುವ ನಾಲ್ನುಡಿಯಂತೆ ಭಗವಾನಕಾ ಬುಲಾವಾ ಆನಾ ಚಾಹಿಯೆ ಅಂದರೆ ದೇವರು ಕರೆಸಿಕೊಳ್ಳಬೇಕು ಅಂತಹವನಿಗೆ ಮಾತ್ರ ಯಾತ್ರೆಮಾಡುವ, ದೇವದರ್ಶನಭಾಗ್ಯ ಸಿಗುವದು. ಕೆಲವರು ಜೋಷಿಮಠದ ತನಕ ಬಂದು ಭೂಕುಸಿತದಿಂದ ಮರಳಿದ್ದು ಈ ನಾಲ್ನುಡಿ ಇಲ್ಲಿ ನಿಜವಾಗಿರುವದನ್ನು ಕಾಣಬಹುದು.
ಹರಿದ್ವಾರ ಹಿಮಾಲಯದ ಹೆಬ್ಬಾಗಿಲು. ಬದರಿನಾಥದ ಯಾತ್ರೆ ಇಲ್ಲಿಂದಲೇ ಪ್ರ್ರಾರಂಭವಾಗುವದು. ವಿಮಾನ, ರೈಲಿನಲ್ಲಿ ಬಂದವರು ಇಲ್ಲಿಂದ ವಾಹನದಲ್ಲಿ ಹಿಮಾಲಯವನ್ನೆರಬೇಕು. ಪ್ರಯಾಣಕ್ಕೆ ಬೇಕಾದ ಉತ್ತಮವಾಹನ, ಆಹಾರ, ನೀರು, ವಾಹನದ ಇಂಧನ, ಔಷಧಿ, ಬೆಚ್ಚಗಿನಉಡುಪು ಇತ್ಯಾದಿಯಾಗಿ ಅನೇಕಬಗೆಯ ಪೂರ್ವಸಿದ್ಧತೆಯೊಂದಿಗೆ ಗಮ್ಯಸ್ಥಾನವನ್ನು ಸೇರಬೇಕು. ಎಲ್ಲವೂ ಸರಿಯಾಗಿದ್ದರೆ ಸುಮಾರು 12 ಘಂಟೆಗಳ ಪ್ರಯಾಣದ ನಂತರ ಬದರಿನಾಥವನ್ನು ಸೇರಬಹುದು. ನಾವು ಜುಲೈ 17ರಂದು ಪ್ರಯಾಣಮಾಡುತ್ತಿದ್ದು ಭಾರತದ ಉತ್ತರದ ಭಾಗದಲ್ಲಿನ್ನೂ ಮುಂಗಾರು ಪ್ರವೇಶವಾಗಿರದಿದ್ದಕಾರಣ ಪ್ರಯಾಣದಲ್ಲಿ ಎಲ್ಲೂ ವರುಣನ ಆಗಮನವಾಗಿರಲಿಲ್ಲ. ಒಮ್ಮೆ ಮಳೆಗಾಲ ಪ್ರಾರಂಭವಾದರೆ ಭೂಕುಸಿತದಿಂದ ನಾವು ಎಲ್ಲಿ ದಾರಿಯಲ್ಲಿ ಸಿಕ್ಕಿಹಾಕಿಕೊಳ್ಳುತ್ತೆವೊ ಎಂಬ ಭಯಕಾಡುತ್ತಿತ್ತು. ಆದರೆ ದೇವರದಯೆಯಿಂದ ಕ್ಷೇಮವಾಗಿ ಬದರಿಯ ಶಾಖಾಮಠವನ್ನು ಸೇರಿದೆವು. ಜೊತೆಗೆ ಎರಡು ತಿಂಗಳಿಗೆ ಬೇಕಾದ ಅವಶ್ಯಕ ದಿನಸಿ, ಬೇಳೆಕಾಳು ಔಷಧ ಇತ್ಯಾದಿಸಂಗ್ರಹ ತಂದಿರುವದರಿಂದ ಮುಂದಿನ ಎರಡು ತಿಂಗಳವಾಸ್ತವ್ಯದ ಧೈರ್ಯವಿತ್ತು.
ಬದರಿಯ ಶಾಖಾಮಠ : ಬದರಿಕಾಶ್ರಮದ ನಮ್ಮ ಶಾಖಾಮಠ ಸಕಲ ಸೌಕರ್ಯದಿಂದ ಕೂಡಿದ ಸುಸಜ್ಜಿತ ಕಟ್ಟದ. ಶ್ರೀಗಳವರ ವಾಸ್ತವ್ಯ, ದೇವರಕೋಣೆ, ನೈವೇದ್ಯದಕೋಣೆ, ಪರಿಚಾರಕರು, ಕಾರ್ಯಕರ್ತರು ಇತ್ಯಾದಿಯಾಗಿ ಎಲ್ಲರವಾಸ್ತವ್ಯಕ್ಕೆ ಬೇಕಾದ ಅನುಕೂಲವಿತ್ತು. ವಿಶೇಷವಾಗಿ ಚಾತುಮರ್ಾಸದ ಅನುಕೂಲಕ್ಕೆ ಬೇಕಾದ ವಿಶಾಲವಾದ, ಆದ್ಯಗುರುವರ್ಯರ ಸ್ಮರಣಾರ್ಥ ಕಟ್ಟಲಾಗಿದ್ದ ಶ್ರೀ ನಾರಾಯಣ ತೀರ್ಥ ಸಭಾಗೃಹ ಸುಮಾರು 200 ಜನರಿಗೆ ಕುಳಿತುಕೊಳ್ಳುವಷ್ಟು ವಿಶಾಲವಾಗಿತ್ತು. ಪಕ್ಕದಲ್ಲೆ ಪಾಕಶಾಲೆ, ಉಗ್ರಾಣ, ಜನರೇಟರ ಇತ್ಯಾದಿಯಾಗಿ ಎಲ್ಲವೂ ಸಿದ್ಧಗೊಳಿಸಲಾಗಿತ್ತು. 1986 ರಲ್ಲಿ ಶ್ರೀಪಾದಂಗಳವರ ಬದರಿಚಾತುಮರ್ಾಸದಲ್ಲಿ ಈ ಸ್ಥಳವನ್ನು ಖರೀದಿಸಿ 1989 ರಲ್ಲಿ ಈ ನೂತನ ವಾಸ್ತು ಶ್ರೀ ಜೀವೋತ್ತಮ ಮಠದ ಉದ್ಘಾಟನೆ ಶ್ರೀಗಳವರ ಅಮೃತಹಸ್ತದಿಂದ ನೆರವೇರಿತು. ಬದರಿನಾಥದ ಬಸ್ಸ್ಸುನಿಲ್ದಾಣದಿಂದ 200 ಮೀಟರ ಅಂತರದಲ್ಲಿದ್ದು ಸುತ್ತಮುತ್ತಲು ಇತರ ಸೌಕರ್ಯಗಳ ಲಭ್ಯವಿತ್ತು.
ಪರ್ತಗಾಳಿಯಿಂದ ದಿನಾಂಕ 09/07/2019ರಂದು ಹೊರಟು ಬೆಂಗಳೂರು, ಮಂಗಳೂರು, ಮುಂಬೈಗಳಲ್ಲಿ ಶ್ರೀದ್ವಾರಕಾನಾಥ ತೀರ್ಥರ ಜನ್ಮಶತಾಬ್ದಿ ಕಾರ್ಯಕ್ರಮವನ್ನು ಆಚರಿಸುತ್ತಾ ದಿನಾಂಕ 21/07/2019 ರಂದು ದೆಹಲಿಯ ಜಿಎಸ್ಬಿ ಸಂಸ್ಕೃತಿ ಭವನದಲ್ಲಿ ವಾಸ್ತವ್ಯ ಮಾಡಿ ಅಲ್ಲಿಂದ ಪ್ರಯಾಣಬೆಳಸಿ ರುದ್ರಪ್ರಯಾಗದಲ್ಲಿ ವಾಸ್ತವ್ಯಮಾಡಿ ಮರುದಿನ ದುರ್ಗಮ ಹಿಮಾಲಯದ ಶಿಖರದಲ್ಲಿ ಪ್ರಯಾಣಿಸುತ್ತಾ 23/07/2019 ಸಾಯಂ 02:28ಕ್ಕೆ ಶಾಖಾಮಠದಲ್ಲಿ ಪಾದಾರ್ಪಣೆ ಮಾಡಿದರು. ಸುಮಾರು 150ಕ್ಕೂ ಅಧಿಕ ಭಕ್ತಗಣ ಆಗಲೆ ಅಲ್ಲಿಬಂದು ಸೇರಿದ್ದು ಶ್ರೀಗಳವರ ಆಗಮನದ ನಿರೀಕ್ಷೆಯಲ್ಲಿದ್ದರು. ಮಾವಿನತೋರಣದಿಂದ ಅಲಂಕೃತ ಚಪ್ಪರದಲ್ಲಿ ದೆಹಲಿಯ ಗಣೇಶಮಲ್ಯರವರು ಶ್ರೀಗಳವರ ಪಾದಪ್ರಕ್ಷಾಲಣೆಮಾಡಿ ಮಾಲಾರ್ಪಣೆಯೊಂದಿಗೆ ಉಭಯ ಶ್ರೀಗಳವರನ್ನು ಹಾರ್ದಿಕವಾಗಿ ಬರಮಾಡಿಕೊಂಡರು.
ಬದರಿನಾಥದಲ್ಲಿ ದೇವದರ್ಶನ : ಬದರಿನಾಥ ತಲುಪಿದನಂತದ ಮರುದಿನ ಅಂದರೆ 24/07/2019ರ ಸಾಯಂಕಾಲ ದೇವದರ್ಶನಕ್ಕೆ ಬದರಿನಾರಾಯಣ ಮಂದಿರಕ್ಕೆ ತೆರಳಿದರು. ಮಠದಲ್ಲಿ ನೆರೆದಿದ್ದ ಭಕ್ತಗಣದೊಂದಿಗೆ ಸುಮಾರು 750 ಮೀಟರ ದೂರದಲ್ಲಿರುವ ಮಂದಿರಕ್ಕೆ ತಲುಪಿ ಮೊದಲು ಅಲಕಾನಂದ ನದಿಯಬಳಿ ತೆರಳಿ ತೀರ್ಥಪ್ರೋಕ್ಷಣೆ, ಪ್ರಾಶನಮಾಡಿ, ದೇವದರ್ಶನಕ್ಕೆ ತೆರಳಿದರು. ಸಿಂಹದ್ವಾರದ ಮೂಲಕ ಪಾವಟಿಗೆಯನ್ನೇರಿ ಪೂರ್ವಭಿಮುಖವಾಗಿರುವ ಬದರಿನಾರಾಯಣನ ಪ್ರಧಾನಮಂದಿರಕ್ಕೆ ತಲುಪಿ ಪದ್ಮಾಸನಸ್ಥಿತ ಯೋಗಮುದ್ರೆಯಲ್ಲಿರುವ ಸಾಲಿಗ್ರಾಮಶಿಲೆಯ ಸ್ವಯಂಭು ಬದರಿನಾರಾಯಣನ ದರ್ಶನ ಪಡೆದರು. ಅಲ್ಲಿಯ ಅರ್ಚಕರು ಗರ್ಭಗೃಹದಲ್ಲಿರುವ ದೇವವಿಗ್ರಹಗಳ ಪರಿಚಯ ನೀಡುತ್ತ ಪ್ರಧಾನವಾಗಿ ಶ್ರೀಮನ್ನಾರಾಯಣ, ಕುಬೇರ, ಹನುಮಂತ, ಗರುಡ, ನರನಾರಾಯಣ, ಉತ್ಸವಮೂತರ್ಿಯಾದ ಉದ್ಧವನ ವಿಗ್ರವನ್ನು ತೋರಿಸಿದರು, ಮಂದಿರದ ಪ್ರದಕ್ಷಿಣಾಪಥದಲ್ಲಿ ಮಹಾಲಕ್ಷ್ಮೀ, ಶಂಕರಾಚಾರ್ಯರ ಗದ್ದುಗೆ, ಹನುಮಂತ, ಕೃಷ್ಣ-ಅರ್ಜುನ, ಘಂಟಾಕರ್ಣ ಇತ್ಯಾದಿ ದೇವರದರ್ಶನ ಪಡೆದರು. ಮಂದಿರಸಮಿತಿಯ ವತಿಯಿಂದ ಗೌರವಾರ್ಪಣೆಯಾಗಿ ದೇವರಿಗೆ ಅಪರ್ಿಸಿದ ತುಳಸಿಮಾಲೆ, ವಸ್ತ್ರವನ್ನು ಸ್ವೀಕರಿಸಿದರು. ತಮ್ಮ ಭಕ್ತಗಣದೊಂದಿಗೆ ಅವರ ಅಪೇಕ್ಷೆಯಂತೆ ಸಿಂಹದ್ವ್ವಾರದಲ್ಲಿ ಪೋಟೊಕ್ಕೆ ನಿಂತು ಸ್ವಮಠಕ್ಕೆ ತೆರೆಳಿದರು.
ವೇದವ್ಯಾಸ ಪೂಜೆಯೊಂದಿಗೆ ಚಾತುಮರ್ಾಸ ವ್ರತಸ್ವೀಕಾರ : ಮಠಪರಂಪರೆಯಂತೆ ಆಷಾಡ ವದ್ಯಪಂಚಮಿಗೆ ವ್ರತಸ್ವಿಕಾರ ಕಾರ್ಯಕ್ರಮವಿದ್ದರೂ ವಿಶೇಷವಾಗಿ ಗಂಗೆಯ ಉತ್ತರಭಾಗದಲ್ಲಿ ಚಾತುರ್ಮಾಸದ ಈ ನಿಯಮಕ್ಕೆ ಬದಲಾವಣೆಗೆ ಅಲ್ಪ ಅವಕಾಶವಿ ರುವದರಿಂದ ವದ್ಯಅಷ್ಟಮಿಯಂದು (25/07/2019)ರ ಬೆಳಿಗ್ಗೆ ಮೃತ್ತಿಕಾಪೂಜನೆಯ ಕಾರ್ಯಕ್ರಮ ಜರುಗಿತು. ಮಂಗಳೂರು ಮಠದ ಅಧ್ಯಕ್ಷರೂ ಸಮಿತಿಯಲ್ಲಿನ ಅತ್ಯಂತ ಹಿರಿಯರಾದ ಪ್ರಭಾಕರ ಕಾಮತ ಮಂಗಳೂರ ಇವರು ಮೃತ್ತಿಕಾಪೂಜನ ಕಾರ್ಯಕ್ರಮವನ್ನು ಪೂರೈಸಿದರು. ಚಾತುರ್ಮಾಸ ವ್ರತವನ್ನು ಉಭಯಯತಿವರ್ಯರು ಸಂಕಲ್ಪಿಸಿದರು. ಅದನ್ನು ನಿರ್ವಿಘ್ನತೆಯಿಂದ ನಡೆಸಿಕೊಡುವ ಜವಾಬ್ದಾರಿ ಚಾತುರ್ಮಾಸ ಸಮಿತಿಯು ನಿರ್ವಹಿಸಬೇಕಾಗುವದು. ಈ ಕಾರ್ಯದ ಹೊಣೆಗಾರಿಕೆಯನ್ನು ಕಾಯಾ ವಾಚಾ ಮನಸಾ ಶಿರಸಾವಹಿಸಿ ನಿರ್ವಹಿಸುವದಾಗಿ ಸಮಿತಿಯ ಪರವಾಗಿ ಪ್ರಭಾಕರ ಕಾಮತ್ ಮತ್ತು ಪುತ್ತು ಪೈಯವರು ಇತರ ಸದಸ್ಯರೊಂದಿಗೆ ಶ್ರೀಗಳವರಿಗೆ ವಾಗ್ದಾನನೀಡಿದರು. ಮಧ್ಯಾಹ್ನ ಮಹಾಪೂಜೆಯ ಸಮಯದಲ್ಲಿ ಪಂಚಾಮೃತ, ನಾರಿಕೇಳ ಅಭಿಷೇಕವಮಾಡಿ ಸಂಪ್ರೋಕ್ಷಣೆಯೊಂದಿಗೆ ಮಹಾಪೂಜೆಯನ್ನು ಪೂರೈಸಿ ಸಾಯಂಕಾಲ 06:30 ಕ್ಕೆ ಸಭಾಕಾರ್ಯಕ್ರಮ ಜರುಗಿತು.
ಚಾತುರ್ಮಾಸದ ದಿನಚರಿ : ಶ್ರೀಗಳವರ ದಿನಚರಿ ಇಲ್ಲಿ ವಿಶೇಷವಾಗಿ ಉಲ್ಲೇಖಿಸಲೆಬೇಕು. ಶ್ರೀಗಳವರ ನಿತ್ಯವಾಸ್ತವ್ಯ ಪರ್ತಗಾಳಿಯಲ್ಲಿ. ಈ ಸ್ಥಳವಿರುವದು ಗೊಮಾಂತಕದ ಸಮುದ್ರಪಾತಳಿಯಲ್ಲಿ. ಚಾತುರ್ಮಾಸದ ವಾಸ್ತವ್ಯ ಸಮುದ್ರಪಾತಳಿಯಿಂದ 3133 ಮೀಟರ ಎತ್ತರರದ ಹಿಮಾಲಯದ ಮೈಕೊರೆಯುವ ಚಳಿ ಮತ್ತು ಶುಷ್ಕವಾತಾವರಣದಲ್ಲಿ. ಆದರೆ ಇದ್ಯಾವದೂ ಶ್ರೀಗಳವರ ದೈನಂದಿನ ಕಾರ್ಯಕ್ರಮಕ್ಕೆ ಅಡ್ಡಿಮಾಡಲಾರವು. ಪ್ರತಿನಿತ್ಯ ಪ್ರಾತಃ 07:30 ರೊಳಗೆ ನಿರ್ಮಲ್ಯ ವಿಸರ್ಜನೆ. ಸೂರ್ಯೋದಯದಿಂದ 18 ಘಂಟಿಯೊಳಗೆ ಅಂದರೆ ಮಧ್ಯಾಹ್ನ 12:30ರೊಳಗೆ ಮಹಾಪೂಜೆ ಸಂತರ್ಪಣೆ, ಸಹಸ್ರಬ್ರಾಹ್ಮಣ ಭೊಜನ, ರಾತ್ರಿ 7:30ಕ್ಕೆ ರಾತ್ರಿ ಪೂಜೆಪೂರೈಸಬೇಕು. ಈ ನಿಯಮ ಪರ್ತಗಾಳಿಯಲ್ಲಿರಲಿ ಇಲ್ಲವೆ ಹಿಮಾಲಯದಲ್ಲಿರಲಿ ಸಮಯಕ್ಕೆ ಸರಿಯಾಗಿ ನಡೆಯಲೇ ಬೇಕಾದ ನಿತ್ಯಕಾಯಕಗಳು. ಈ ಸಮಯದಲ್ಲಿ ಪ್ರತಿ ಊರಿನಲ್ಲಿ ಭಕ್ತಗಣ ತಮ್ಮ ಗಡಿಯಾರನೋಡಿ ಮಠದಲ್ಲಿ ಪೂಜೆನಡೆಯುತ್ತಿದೆ ಎಂದು ಉದ್ಘರಿಸುತ್ತಾರೆ. ಈ ಸಮಯಪಾಲನೆ ಶ್ರಿಗಳವರ ವಿಶೇಷತೆ. ಹಿಮಾಲಯದ ವಾತಾವರಣದಲ್ಲಿ ಬೆಳಗಿನ ಉಷ್ಣತೆ 8-10 ಡಿಗ್ರಿಇರುತ್ತದೆ. ನೀರಿನ ಉಷ್ಣತೆ 4-5 ಡಿಗ್ರಿಇರುತ್ತದೆ. ನೀರಿನಟಾಕಿಯಿಂದ ಬರುವನೀರು ಎಷ್ಟು ಶೀತಲವೆಂದರೆ ಸ್ನಾನಮಾಡುವದಿರಲಿ ಮುಟ್ಟುವಂತಿರುವದಿಲ್ಲ್ಲ. ಕೆಲವುದಿನ ಪರಿಚಾರಕ ತಪ್ಪಿನಿಂದಲೋ, ಗ್ಯಾಸಗೀಸರಿಗೆ ಪ್ರಾಣವಾಯುವಿನ ಕೊರತೆಯಿಂದಲೊ ಸ್ನಾನದ ನೀರು ಸಾಕಷ್ಟುಬಿಸಿಯಿರದಿದ್ದರು ಸಮಯಪಾಲನೆ ದೃಷ್ಟಿಯಿಂದ ಕೇವಲ ಉಗುರುಬೆಚ್ಚನೆಯ ನೀರಿನಲ್ಲಿ ಸ್ನಾನಮಾಡಿ ನಂತರ ಮೈ ಬಿಸಿಯಾಗಿದ್ದೂ ಇದೆ. ಆದರೆ ಸಮಯಪಾಲನೆ ರಕ್ತಗತವಾಗಿದ್ದು ಅದಕ್ಕೆ ಯಾವದೂ ತೊಂದರೆಗಳು ಅಡಿಬರಲಿಲ್ಲ.
ಚಾತುಮರ್ಾಸದ ಅವಧಿಯಲ್ಲಿ ಬರುವ ಹಬ್ಬಹರಿದಿನಗಳು ಪರಂಪರೆಯ ಗುರುವರ್ಯರ ಪುಣ್ಯತಿಥಿಗಳು ಹೀಗೆ ಆಚರಣೆಯಲ್ಲಿ ಪ್ರಮುಖವಾಗಿ ನಾಗಪಂಚಮಿ, ಋಕ್ಶ್ರಾವಣಿ, ಋಷಿಪಂಚಮಿಯಂದು ಶ್ರೀ ಜೀವೊತ್ತಮ ತೀರ್ಥರ ಪುಣ್ಯತಿಥಿ, ಶ್ರೀಗಳವರ ಜನ್ಮದಿನದಂದು ಅಭಿವಂದನಾದಿವಸ, ಗಣೇಶೋತ್ಸವ, ಅನಂತಚತುರ್ದಶಿ ಇತ್ಯಾದಿಕಾರ್ಯಕ್ರಮಗಳು ಯಥಾರೀತಿಯಲ್ಲಿ ಸಂಪನ್ನಗೊಂಡವು. ಸಹಸ್ರ ಬ್ರಾಹ್ಮಣದ ಅಂಗವಾಗಿ ಸೇವಾದಾರರು ಪ್ರತಿದಿನ ಶ್ರೀವಿಷ್ಣುವಿನ ಹೆಸರಿನಲ್ಲಿ ಬ್ರಾಹ್ಮಣರಿಗೆ ಸಾಲಿಗ್ರಾಮತೀರ್ಥ, ವಿಷ್ಣುನಿಮರ್ಾಲ್ಯದ ತುಳಸಿನೀಡಿ ಭೋಜನ ದಕ್ಷಿಣೆನೀಡಿ ಸತ್ಕರಿಸಬೇಕು, ಹೀಗೆ ಪ್ರತಿದಿನ ನಡೆಯಬೇಕು. ಈ ಕ್ಷೇತ್ರದಮಹಿಮೆಯಂತೆ ಇಲ್ಲಿ ನಡೆಯುವ ಕಾರ್ಯಕ್ಕೆ ಸಹಸ್ರಪಟ್ಟುಫಲವೆಂದು ಸ್ಥಾನಿಕ ಫಂಡಾಗಳು ಕ್ಷೇತ್ರಮಹಿಮೆಯಲ್ಲಿ ತಿಳಿಸುತ್ತಾರೆ. ಇಲ್ಲಿ ಸಹಸ್ರಬ್ರಾಹ್ಮಣ ಮಾಡಿಸಿದ ಸೇವಾದಾರರೂ ನಿಜಕ್ಕೂ ಭಾಗ್ಯವಂತರೇ ಸರಿ.
ಭಕ್ತಭಾವಿಕರ ಬದರಿಯಾತ್ರೆ ; ಶ್ರೀಗಳವರ ಚಾತುರ್ಮಾಸ ಬದರಿಯಲ್ಲಿ ಎಂದು ಸುದ್ದಿ ಕಾಳ್ಗಿಚ್ಚಿನಂತೆ ಪಸರಿಸುತ್ತಿದ್ದಂತೆ ಭಕ್ತಸಮೂಹದಲ್ಲಿ ಒಮ್ಮೆ ವಿದ್ಯುತ್ಸಂಚಾರವಾಯಿತು. ಪ್ರತಿ ಊರಿನಲ್ಲಿ ಬದರಿಯಾತ್ರೆಯಕುರಿತು ಮಾತುಗಳು. ಯಾರಬಾಯಲ್ಲೂ ಕೇಳಿದರು ಬದರಿಗೆ ಹೊಗುವ ರೈಲ, ವಿಮಾನ, ಯಾತ್ರಾನಿಯೋಜಕರ ಸುದ್ದಿಗಳು. ವಾಟ್ಸಾಪನಲ್ಲಿ ಬದರಿಯಬಗ್ಗೆ, ರೈಲ-ವಿಮಾನ, ಬದರಿಯಮಾರ್ಗಸೂಚಿಬಗ್ಗೆ ಸುದ್ದಿಗಳ ಹರಿದಾಟ. ಪ್ರತಿ ಊರಿನಲ್ಲಿ ಯಾತ್ರಾರ್ಥಿಗಳ ತಂಡ ರೂಪಗೊಳ್ಳುತಿತ್ತು. ಈ ಸುದ್ದಿ ಕೇಳುತ್ತಿದ್ದಂತೆ ಸಮಿತಿಯ ವತಿಯಿಂದ ಶ್ರೀಗಳವರ ಪೂವರ್ಾನುಮತಿಯಿಂದ ಯಾತ್ರೆಯ ಮಾರ್ಗಸೂಚಿ, ಸಂದರ್ಶಿಸಬಹುದಾದ ಕ್ಶೇತ್ರಗಳು, ಅಲ್ಲಿಯ ಪೌರಾಣಿಕ ಕಥಾಭಾಗ, ವಾಸಯೋಗ್ಯ ವಸತಿಗ್ರಹದ ಯಾದಿ, ಸಂಚಾರಕ್ಕೆ ಬೇಕಾದ ವಾಹನದ ಮಾಹಿತಿ ಇತ್ಯಾದಿಯಾಗೆ 100ಕ್ಕೂ ಅಧಿಕ ಮಾಹಿತಿಯನ್ನು ವ್ಯಾಟ್ಸಪ್ ಮೂಲಕ ರವಾನಿಸಲಾಯಿತು. ಇದಕ್ಕಾಗಿಯೆ ಪ್ರತಿ ಊರಿನಲ್ಲಿಯ ವ್ಯಾಟ್ಸಪ್ಗ್ರೂಪನ ಮಾಹಿತಿ ಸಂಗ್ರಹಿಸಿ ಅವರ ಸಹಕಾರದೊಂದಿಗೆ ಬದರಿ ಚಾತುಮರ್ಾಸ ಹೆಸರಿನ ಗ್ರೂಪಮೂಲಕ ಎಲ್ಲರಿಗೂ ಏಕಕಾಲದಲ್ಲಿ ಅವಶ್ಯಕ ಮಾಹಿತಿಯ ವಿನಿಮಯ ನಡೆಯಿತು. ಅನೇಕರ ತಮ್ಮ ಸಂದೇಹವನ್ನು ತಿಳಿಯಪಡಿಸಿದಾಗ ಅದಕ್ಕೆ ಸೂಕ್ತ ಸಲಹೆಯನ್ನೂ ನೀಡಲಾಯಿತು. ಪ್ರತಿದಿನದ ಹವಾಮಾನ, ಸಂಚಾರದ ರಸ್ತೆಯ ಮಾಹಿತಿ, ಭೂಕುಸಿತದ ಎಚ್ಚರಿಕೆ ಹೀಗೆ ಅನೇಕಬಗೆಯ ಮಾಹಿತಿಯಿಂದ ಭಕ್ತರ ಯಾತ್ರೆಗೆ ಅನುಕೂಲ ಮಾಡಿಕೊಡಲಾಗುತ್ತಿತ್ತು. ಬದರಿಕಾಶ್ರಮಕ್ಕೆ ಬರಲಾಗದ ಭಕ್ತರಿಗಾಗಿ ಮಠದಲ್ಲಿಯ ಪ್ರತಿನಿತ್ಯದ ತ್ರಿಕಾಲಪೂಜೆ, ಇತರ ಫೊಟೊ ವಿಡಿಯೊಮೂಲಕ, ಬದರಿಯ ಇತರಸ್ಥಳಗಳ ಮಾಹಿತಿ, ಅಲ್ಲಿಯ ಸ್ಥಾನಿಕ ಉತ್ಸವಗಳ ಸಂಪೂರ್ಣಮಾಹಿತಿ ಪ್ರತಿದಿನ ರವಾನೆಯಗುತ್ತಿತ್ತು. ಅನೇಕರು ಪ್ರತಿನಿತ್ಯದ ಈ ಮಾಹಿಯನ್ನು ಕಂಡು ಸಂತೋಷವ್ಯಕ್ತ ಪಡಿಸಿ ಸಂದೇಶವನ್ನು ರವಾನಿಸಿದ್ದಾರೆ. ಚಾತುರ್ಮಾಸ ಸಮಿತಿಗೆ ಇದಕ್ಕಿಂತೆ ಹೆಚ್ಚಿನ ಸಂತೋಷ ಇನ್ನೆನು ಬೇಕು. ತಮ್ಮ ಜೀವನದಲ್ಲಿ ಇಂತಹ ಸತ್ಕಾರ್ಯಗಳು ನಿರಂತರವಾಗಿ ಜರುಗುತ್ತಲಿರಲಿ ಎಂದು ಹರಿಗುರುಗಳಲ್ಲಿ ಬೇಡಿಕೊಂಡು ತಮ್ಮ ಜೀವನದ ಅಮೂಲ್ಯಘಳಿಗೆಯನ್ನು ಆನಂದಿಸಿದರು.
ಬದರಿಗೆ ಬರುವ ಮಾರ್ಗದಲ್ಲಿ ಅನೇಕ ಅಡೆತಡೆಗಳನ್ನು ಸಮರ್ಥವಾಗಿ ಎದುರಿಸಿ, ಮಾರ್ಗಮಧ್ಯದ ಭೂಕುಸಿತದ ಮಾರ್ಗವನ್ನು ಕಾಲ್ನಡಿಗೆಯಲ್ಲಿಕ್ರಮಿಸಿ ಹಿಮಾಲಯದ ಪರ್ವತಾರೋಹಣವನ್ನು ಕಷ್ಟದಿಂದ ಕ್ರಮಿಸಿ ಹರಿಗುರುಗಳ ದರ್ಶನದೊಂದಿಗೆ ಎಲ್ಲವನ್ನು ಮರೆತು ಗುರುಗಳಲ್ಲಿ ತಮ್ಮ ಯಾತ್ರೆಯ ಸಾರ್ಥಕತೆಯನ್ನು ವ್ಯಕ್ತಪಡಿಸಿದ್ದಾರೆ. ಬದರಿಯಾತ್ರೆಯ ಈ ಘಳಿಗೆ ತಮ್ಮ ಜೀವನದ ಮರೆಯಲಾಗದ ಅಮೂಲ್ಯಕ್ಷಣಗಳು. ಇಂತಹ ಕ್ಷಣ ಜೀವನದಲ್ಲಿ ಇನ್ನೆಂದೂ ಬಾರದ ಸಮಯವೆಂದು ಆನಂದಭಾಷ್ಪಗಳಿಂದ ವ್ಯಕ್ತಪಡಿಸಿದ ಸಮಯ ಕೇಳುಗರಿಗೂ ಕಣ್ಣಂಚಿನಲ್ಲಿ ನೀರುಬರಿಸಿದವು. ಬದರಿಯಾತ್ರೆಯ ವರ್ಣನೆಕೇಳಿ ಬರಲಾಗದವರಿಗೆ ಇನ್ನೊಮ್ಮೆ ಗುರುಗಳು ಇಲ್ಲಿ ಚಾತುರ್ಮಾಸ ಆಚರಿಸಲಿ, ನಮಗೂ ಮತ್ತೊಮ್ಮೆ ಈ ಯಾತ್ರೆಯಿಂದ ದೇವದರ್ಶನ ಲಾಭ ಲಭಿಸಲಿ ಎಂದು ದೇವರಲ್ಲಿ ಬೇಡಿ ಹರಕೆಹೊತ್ತರು. ಕರ್ನಾಟಕ, ಮಹಾರಾಷ್ತ್ರ ಗೋಮಾಂತಕ, ಕೇರಳ ರಾಜ್ಯದ ವಿವಿಧಭಾಗಗಳ ಎರಡುನೂರಕ್ಕು ಹೆಚ್ಚಿನಪ್ರದೇಶಗಳ ಸಪ್ತಕೊಂಕಣವಾಸಿಗಳ ಸುಮಾರು 2874ಕ್ಕೂ ಅಧಿಕ ಜನರು ಬದರಿಕಾಶ್ರಮಕ್ಕೆ ಬಂದಿರುವಬಗ್ಗೆ ಸಮಿತಿಯ ನೊಂದಣಿ ಪುಸ್ತಕದಲ್ಲಿ ದಾಖಲಾಗಿದೆ. ಇಲ್ಲಿ ಒಂದುಬಾರಿ ಬರುವದೆ ಕಷ್ಟದಾಯಕ ಆದರೆ ಗೋಮಾಂತಕದ ಪ್ರಸಾದ ಕೊಸಂಬೆಯವರು ಮೂರುಬಾರಿ ಬಂದಿದ್ದಾರೆ.
ದೇವಭೂಮಿಯಲ್ಲಿನ ಈ ಪವಿತ್ರಕಾರ್ಯದಲ್ಲಿ ಭಾಗಿಯಾಗಲು ಪೂರ್ವಪುಣ್ಯದ ಸುಕೃತದಿಂದ ಮಾತ್ರಸಾಧ್ಯ ಎಂಬುದು ನಿಶ್ಚಿತ. ಹೂವಿನೊಂದಿಗೆ ನಾರುಎಂಬಂತೆ ಸಮಿತಿಯ ಅನೇಕ ಸದಸ್ಯರಿಗೆ, ಕಾರ್ಯಕರ್ತರಿಗೆ ಇದು ಲಭ್ಯವಾಗಿದೆ. ಚಾತುರ್ಮಾಸದ ಆ 55 ದಿನಗಳನ್ನು ದೇವಕಾರ್ಯದಲ್ಲಿ ವಿನಿಯೋಗಿಸಲು ಮಾನಸಿಕವಾಗಿ, ದೈಹಿಕವಾಗಿ ಗುರುಗಳ ಹಾಗೂ ಭಕ್ತರಸೇವೆಯಲ್ಲಿ ತಮ್ಮ ಜೀವನದ ಅಮೂಲ್ಯ ಕ್ಷಣಗಳನ್ನು ವಿನಿಯೋಗಿಸುವ ಭಾಗ್ಯ ಕೆಲವೇ ಜನರಿಗೆ ಲಭ್ಯವಾಗಿದ್ದ ಬಗ್ಗೆ ಅವರಿಗೂ ಧನ್ಯತಾಭಾವವಿದೆ. 78ರ ವಯೋವೃದ್ಧರಿಂದ 21ರ ಹರೆಯದ ತರುಣರು ನಮ್ಮ ತಂಡದಲ್ಲಿದ್ದರು. ವಿವಿಧಕ್ಷೇತ್ರದಲ್ಲಿ ನುರಿತ ಈ ತಂಡ ಬದರಿನಾಥದಲ್ಲಿ ಯಾವಕಾರ್ಯಕ್ಕೂ ಕೊರತೆಯಾಗದಂತೆ ಪುತ್ತು ಪೈಯವರ ನೇತ್ರತ್ವದಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಿದ ಬಗ್ಗೆ ಜನರಿಂದ ಪ್ರಶಂಸೆಪಡೆದಿದೆ. ಈ ಸತ್ಕಾರ್ಯದಲ್ಲಿ ಭಾಗಿಯಾದವರಿಗೆ ಯಾವುದೇರೀತಿಯ ದೈಹಿಕ, ಮಾನಸಿಕ, ಆರೋಗ್ಯದಲ್ಲಿ ಕೊರತೆಯಾಗದಿರುವದು ಅವರ ಸೇವಾಮನೋಭಾವನೆಗೆ ದೈವಬಲವಿರುವದನ್ನು ಸೂಚಿಸುತ್ತದೆ.
ಚಾತುರ್ಮಾಸದ ಸಮಾರೋಪ ಮೃತ್ತಿಕಾ ವಿಸರ್ಜನೆ : ನಾಲ್ಕು ಮಾಸಗಳಕಾಲ ಆಚರಿಸುವ ಚಾತುರ್ಮಾಸ ವ್ರತ ಮೃತ್ತಿಕಾ ವಿಸರ್ಜನೆಯೊಂದಿಗೆ ನಾಲ್ಕುಪಕ್ಷಗಳಕಾಲ ಒಂದೇ ಸ್ಥಳದಲ್ಲಿ ವಾಸವಿರುವದರಿಂದ ಮುಕ್ತವಾಗಿ ಸಂಚರಿಸಲು ಅವಕಾಶ ನೀಡುತ್ತದೆ. ಚಾತುರ್ಮಾಸದ ಮತ್ತೆರಡು ಭಾಗವಾದ ದಧಿವ್ರತ ಮತ್ತು ದ್ವಿದಳಧಾನ್ಯ ವ್ರತಗಳು ಆಚರಣೆಯಲ್ಲಿದ್ದು ಕಾರ್ತಿಕ ದ್ವಾದಶಿಯಂದು ಧಾತ್ರಿಹವನದೊಂದಿಗೆ ಸಂಪನ್ನಗೊಳ್ಳುತ್ತದೆ. ನಾಲ್ಕು ಪಕ್ಷಗಳನಂತರ ನಡೆಯುವ ಮೃತ್ತಿಕಾವಿಸರ್ಜನೆ ಚಾತುಮರ್ಾಸದ ಒಂದು ಭಾಗ. ಅಂದು ಚಾತುಮರ್ಾಸಕ್ಕಾಗಿ ಸಂಗ್ರಹಿಸಿದ ಮೃತ್ತಿಕೆಯನ್ನು ಯಮುನಾ ಪೂಜೆಯೊಂದಿಗೆ ನದಿ, ಸರೋವರಗಳಲ್ಲಿ ವಿಸರ್ಜಿಸಲಾಗುತ್ತದೆ. ಈ ಅವಧಿಯಲ್ಲಿ ನದಿಯನ್ನು ದಾಟಿ ಸಂಚರಿಸುವಂತಿಲ್ಲ, ವಾಹನದಲ್ಲಿ ಸಂಚರಿಸುವಂತಿಲ್ಲ. ಆದ್ದರಿಂದ ಮಠದಿಂದ ಅರ್ಧಕಿಲೊಮಿಟರ ದೂರವಿರುವ ಅಲಕನಂದಾ ನದಿಗೆ ಕಾಲ್ನಡಿಗೆಯಲ್ಲಿ ತಲುಪಿದರು. ಸಂಧ್ಯಾಕಾಲದ ಸಮಯದಲ್ಲಿ ಅಲಕನಂದಾ ನದಿಯತೀರಕ್ಕೆ ಮಿತಪರಿವಾರದೊಂದಿಗೆ ತಲುಪಿ ನದಿಯನ್ನು ಪೂಜಿಸಿ ಮೃತ್ತಿಕಾಪಿಂಡವನ್ನು ನದಿಯಲ್ಲಿ ವಿಸಜರ್ಿಸಲಾಯಿತು.
ಮೃತ್ತಿಕಾ ವಿಸರ್ಜನೆ ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಪ್ರಥಮವಾಗಿ ಮಾತನಾಡಿದ ಪುತ್ತುಪೈಯವರು ಈ ಚಾತುರ್ಮಸಕ್ಕಾಗಿ ಶ್ರಮಿಸಿದ ಎಲ್ಲರಿಗೂ ಸಮಿತಿಯಪರವಾಗಿ ಧನ್ಯವಾದ ಅರ್ಪಿಸಿದರು. ನಂತರ ಭಾವುಕರಾಗಿ ಗದ್ಗತಿತ ಕಂಠದಿಂದ ಆನಂದಭಾಷ್ಪದೊಂದಿಗೆ ತಮ್ಮ ಮಾತನ್ನು ಮುಗಿಸಿದರು. ನಂತರ ಆಶೀರ್ವಚನದಲ್ಲಿ ಮಾತನಾಡಿದ ಗುರುವರ್ಯರು ಭಾವಪರವಶರಾಗಿ ಕಣ್ಣಂಚಿನಲ್ಲಿ ಬಂದಆನಂದಭಾಷ್ಪವನ್ನು ತಡೆದುಕೊಳ್ಳಲು ಪ್ರಯತ್ನಿದರೂ ಅದಾಗಲೆ ಅವರ ಗದ್ಗದಕಂಠದಿಂದಲೆ ಎಲ್ಲರಿಗೆ ಅವರಮನಸ್ಸಿನಭಾವದ ಅರಿವಾಗಿತು.್ತ
ಬದರಿಯಿಂದ ಮರುಪ್ರಯಾಣ : ಚಾತುರ್ಮಾಸದ ಮೃತ್ತಿಕಾವಿಸರ್ಜನೆಯನಂತರ 15/09/2019 ರಂದು ಬದರಿಯಿಂದ ಮರುಪ್ರಯಾಣವೆಂದು ಪೂರ್ವನಿಗದಿತವಾಗಿತ್ತು. ಅದರಂತೆ ಬೆಳಿಗ್ಗೆ ಹೊರಡುವ ತಯಾರಿಯಲ್ಲಿದ್ದಾಗ 150 ಭಕ್ತರ ತಂಡ 6 ಬಸ್ಸಗಳಲ್ಲಿ ಬಂದಿದ್ದರು. ಅವರಭೇಟಿಯ ನಂತರ ಫಲಮಂತ್ರಾಕ್ಷತೆ ನೀಡಿ 08:04 ಕ್ಕೆ ಶ್ರೀಗಳವರು ವಾಹನದಲ್ಲಿ ಮುಂದಿನಪ್ರಯಾಣಕ್ಕೆ ಹೊರಟರು. ಬದರಿನಾಥದಲ್ಲಿ ಹೊರಡುವಾಗಲೆ ಬದರಿಯಿಂದ 20 ಕಿ.ಮಿ. ದೂರದ ಲಾಂಬಾಗಡದಲ್ಲಿ ಭೂಕುಸಿತದಿಂದಾಗಿ ಮಾರ್ಗದಲ್ಲಿ ಪೋಲಿಸರು ಸಣ್ಣವಾಹನಗಳಿಗೆ ಪ್ರಯಾಣ ನಿಷೇದಿಸಿದ್ದಾಗಿ ಸುದ್ದಿಬಂದಿತ್ತು. ಆದರೆ ಪುತ್ತು ಪೈಯವರು ಈ ಮೊದಲೆ ಪೋಲಿಸರಿಂದ ಶ್ರೀಗಳವರ ವಾಹನಕ್ಕೆ ಅನುಮತಿ ಪಡೆದಿದ್ದರಿಂದ 200 ಮೀಟರನ ಈ ಮಾರ್ಗವನ್ನು ದೇವರ ಅನುಗ್ರಹದಿಂದ ವಾಹನದಲ್ಲೆ ಕ್ರಮಿಸಿದರು. ಉಳಿದವರು ಕೆಲವರು ನಡೆದುಕೊಂಡು ಕೆಲವರು ಪಿಟ್ಟುಸವರ್ಿಸ ಮೂಲಕ ಭೂಕುಸಿತದ ಮತ್ತೊಂದು ಪಕ್ಕಕ್ಕೆ ತಲುಪಿದರು. ಇಲ್ಲಿ ಸುಮಾರು 12:00 ಘಂಟೆಗೆ ತಲುಪಿ ನಮಗಾಗಿ ಕಾಯುತ್ತಿದ್ದ ವಾಹನದಲ್ಲಿ ಮುಂದಿನ ಪ್ರಯಾಣಮಾಡಿದೆವು. ಮಾರ್ಗದುದ್ದಕ್ಕೂ ಅಲ್ಲಲ್ಲಿ ಪ್ರಧಾನಮಂತ್ರಿಯವರ ಚಾರಧಾಮ ಸಡಕ್ ಯೋಜನಾ ಅಂತರ್ಗತ ರಸ್ತೆಯ ಅಗಲೀಕರಣದ ಕಾಮಗಾರಿಯಿಂದ ಪ್ರಯಾಣದಲ್ಲಿ ತೊಂದರೆಯೆನಿಸಿದರು ಮುಂದಿನ ದಿನಗಳಲ್ಲಿ ನಿರ್ಮಾಣವಾಗಲಿರುವ ವಿಶಾಲ ರಾಜಮಾರ್ಗ ರಚನೆಕುರಿತು ಸಂತೋಷವಿತ್ತು. ಹರಿದ್ವಾರ ಬದರಿನಾಥ ರಸ್ತೆಯು ರಾಷ್ಟ್ರೀಯ ಹೆದ್ದಾರಿ 58 ಆಗಿದ್ದು ಭಾರತದ ಸುರಕ್ಷಾ ದೃಷ್ಟಿಯಿಂದ ಮತ್ತು ಯಾತ್ರಿಕರ ಪ್ರಯಾಣಕ್ಕೆ ಅತಿಮುಖ್ಯಮಾರ್ಗವಾಗಿದೆ. ಅಲ್ಲಿಂದ ರುದ್ರಪ್ರಯಾಣಕ್ಕೆ ತಲುಪಿ ವಾಸ್ತವ್ಯಮಾಡಿ ಮರುದಿನ ಬೆಳಿಗ್ಗೆ ಅಲ್ಲಿಂದ ಹೊರಟು ಹರಿದ್ವಾರದ ಕಾಶಿಮಠವನ್ನು ತಲುಪಿದೆವು.
ಶ್ರೀಗಳವರು ಹರಿದ್ವಾರ ಕಾಶಿಮಠಕ್ಕೆ ಭೇಟಿ ನೀಡುವಕುರಿತು ಕಾಶಿಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಶ್ರೀಪಾದಗಂಳವರಿಗೆ ಪತ್ರಮುಖೇನ 16/06/2019 ರಂದು ತಾವು ಶಿಷ್ಯಸಹಿತರಾಗಿ ಹರಿದ್ವಾರ ಕಾಶಿಮಠ ವ್ಯಾಸಾಶ್ರಮಕ್ಕೆ ಭೇಟಿ ನೀಡಲಿದ್ದು; ಮಠ ಸಂದರ್ಶನ ಗಂಗಾಸ್ನಾನಾದಿಗಳನ್ನು ಪೂರೈಸಿ ಅಲ್ಲಿಂದ ದೆಹಲಿಗೆ ಮುಂದಿನ ಪ್ರಯಾಣ ಬೆಳಸಲಿದ್ದೇವೆ. ತಮ್ಮ ಆಗಮನದ ಬಗ್ಗೆ ಅಲ್ಲಿಯ ಸ್ಥಾನಿಕ ಸಮಿತಿಯವರಿಗೆ ಸೂಚಿಸಬೇಕಾಗಿ ತಿಳಿಯಪಡಿಸಿದ್ದರು. ಶ್ರೀಗಳು ಮರುಪ್ರಯಾಣದಲ್ಲಿ ಕಾಶಿಮಠಕ್ಕೆ ಭೇಟಿನೀಡಲಿರುವ ಕುರಿತು ಕಾಶಿಮಠದ ಶ್ರೀಸಂಯಮೀಂದ್ರ ಶ್ರೀಪಾದಗಂಳವರ ಸಂದೇಶವನ್ನು ಅವರ ಪ್ರತಿನಿಧಿಗಳು ಮಂಗಳೂರು ಕ್ಯಾಂಪಿನಲ್ಲಿ ವಿನಂತಿಸಿದ್ದರಿಂದ ಪೂರ್ವನಿಗದಿತ ಕಾರ್ಯಕ್ರಮದಂತೆ ಹರಿದ್ವಾರ ಕಾಶಿಮಠ ಕಮಿಟಿಯ ಅಧ್ಯಕ್ಷರಾದ ಕೆ. ಶ್ರೀನಿವಾಸ ಪ್ರಭುಗಳು ಶ್ರೀಗಳವರ ಆಗಮನದ ನಿರೀಕ್ಷೆಯಲ್ಲಿದ್ದರು.
ಶ್ರೀಗಳವರ ಆಗಮನವಾಗುತ್ತಿದ್ದಂತೆ ಪಾದ ಪ್ರಕ್ಷಾಳನಮಾಡಿ ಮಾಲಾರ್ಪಣೆ ಮಾಡಿ ಹಾದರ್ಿಕಸ್ವಾಗತ ಕೋರಿದರು. ನಂತರ ಶ್ರೀ ವೇದವ್ಯಾಸಮಂದಿರಕ್ಕೆ ತೆರಳಿ ದೇವದರ್ಶನ ಪಡೆದು ಪಾದ್ಯಪೂಜೆಯನ್ನು ಸ್ವೀಕರಿಸಿ ಮತ್ತೊಮ್ಮೆ ಹರಿದ್ವಾರದ ವಾಸ್ತವ್ಯಕ್ಕೆ ಬರುವದಾಗಿ ತಿಳಿಯಪಡಿಸಿದರು. ನಂತರ ಮಠದ ಮುಂಭಾಗದಲ್ಲಿ ಹರಿಯುವ ಗಂಗೆಯಲ್ಲಿ ತೀರ್ಥಸ್ನಾನಪೂರೈಸಿ ದಡದಲ್ಲಿಯೆ ಫಲಗಳನ್ನು ಸ್ವೀಕರಿಸಿ ಹರಿದ್ವಾರ ಮಠದ ವಿವಿಧ ಭಾಗಗಳನ್ನು ವೀಕ್ಷಿಸಿ ದೆಹಲಿಯತ್ತ ಪ್ರಯಾಣ ಬೆಳೆಸಿ ರಾತ್ರಿ 08:30ಕ್ಕೆ ದೆಹಲಿಯ ಜಿಎಸ್ಬಿ ಸಂಸ್ಕೃತಿಭವನವನ್ನು ತಲುಪಿದರು. 18ರಂದು ಮಿತಪರಿವಾರದೊಂದಿಗೆ ದೆಹಲಿಯ ಅಕ್ಷರಧಾಮದಲ್ಲಿಯ ಶ್ರೀನಾರಾಯಣ ಮಂದಿರವನ್ನು ಸಂದರ್ಶಿಸಿ ಮರುದಿನ ಸಾಯಂ 20/09/2019 ರಾಜಧಾನಿ ರೈಲಿನಲ್ಲಿ ಪ್ರಯಾಣಿಸಿ ಮುಂಬೈ ವಡಾಳಾ ಶ್ರೀರಾಮಮಂದಿರ ತಲುಪಿ ವಾಸ್ತವ್ಯಮಾಡಿದರು. ಅಲ್ಲಿಂದ 28/09/2019ರ ರಾತ್ರಿ ರೈಲಮೂಲಕ ಪ್ರಯಾಣಿಸಿ ಮರುದಿನ ಮಡಗಾಂವ ತಲುಪಿದರು. ಬದರಿನಾಥದ ಪುಣ್ಯಧಾಮದಿಂದ ಮರುಳುತ್ತಿದ್ದ ಶ್ರೀಗಳವರ ಆಗಮಕ್ಕೆ ಅಪಾರ ಸಂಖ್ಯೆಯ ಜನಸೇರಿದ್ದರು. ರೈಲಿನಿಂದ ಶ್ರೀಗಳವರು ಇಳಿಯುತ್ತಿದ್ದಂತೆ ಭಕ್ತರಜೈಕಾರದೊಂದಿಗೆ ಶ್ರೀಮಠದ ಅಧ್ಯಕ್ಷರಾದ ಶ್ರೀನಿವಾಸ ದೆಂಪೆಯವರು ಉಭಯ ಶ್ರೀಗಳವರಿಗೆ ಮಾಲಾರ್ಪಣೆಮಾಡಿ ನಮಸ್ಕರಿಸಿ ಸಾಂಪ್ರದಾಯಕ ಸ್ವಾಗತಮಾಡಿದರು, ನಂತರ ಗುರುಗಳೊಂದಿಗೆ ಪರ್ತಗಾಳಿಗೆ ತೆರಳಿ ಅಲ್ಲಿಯ ಸಭಾಕಾರ್ಯಕ್ರಮದ ನಂತರ ಬದರಿನಾಥ ಚಾತುಮರ್ಾಸದ ಒಂದು ಯೋಜನೆ ನಿರ್ವಿಘ್ನತೆಯಿಂದ ಫಲಪ್ರದವಾಗಿ ಸಂಪನ್ನಗೊಂಡಿತು.
ಬದರಿನಾಥದಲ್ಲಿಯ ದರ್ಶನೀಯ ಸ್ಥಳಗಳು : ಬದರಿಯಲ್ಲಿ ಬದರಿನಾಥಮಂದಿರ ಅಲ್ಲದೆ ಅನೇಕ ದರ್ಶನೀಯ ಸ್ಥಳಗಳಿದ್ದು ಅವುಗಳಿಗೆ ಪೌರಾಣಿಕ ಹಿನ್ನೆಲೆಯಿದ್ದು ದ್ವಾಪರ, ತ್ರೇತಾಯುಗಗಳ ಘಟನೆಗಳನ್ನು ನೆನೆಪಿಸುತ್ತವೆ. ಅವುಗಳಲ್ಲಿ ಕೆಲವೊಂದು ಸಾಮಾನ್ಯರೂ ಸಂದರ್ಶಿಸಬಹುದಾದರೂ ಕೆಲವನ್ನೂ ದೈಹೀಕ ಸಾಮಾರ್ಥ್ಯವಿರುವವರು ಮಾತ್ರ ತಲುಪಬಹುದಾಗಿದೆ. ಇವುಗಳಲ್ಲಿ ಕೆಲವೊಂದನ್ನು ಇಲ್ಲಿ ಪರಿಚಯಿಸಲಾಗಿದೆ.
ವ್ಯಾಸಗುಫಾ : ಸಾಮಾನ್ಯರಿಗೂ ಅರ್ಥವಾಗುವಂತೆ ವೇದಗಳನ್ನು ವಿಭಜಿಸಿದ, ಪಂಚಮವೇದವೆನಿಸಿದ ಮಹಾಭಾರತದ ರಚನಕಾರನೆಂದು ಪ್ರಸಿದ್ಧನಾದ ವೇದವ್ಯಾಸನು ಈ ಗುಹೆಯಲ್ಲಿ ಕುಳಿತು ಮಹಾಭಾರತವನ್ನು ಬರೆದನೆಂದು ಪ್ರತೀತಿ. ಈ ಗುಹೆಯ ಮೇಲ್ಭಾಗವನ್ನು ವ್ಯಾಸಪೊಥಿಯೆನ್ನುತ್ತಾರೆ. ಈ ಕಲ್ಲಿನ ರಚನೆ ಪುಸ್ತಕದ ಹಾಳೆಗಳಂತೆ ಕಾಣುವದು ವಿಶೇಷ. ಗುಹೆಯ ಒಳಭಾಗದಲ್ಲಿ ವೇದವ್ಯಾಸರ 3 ಅಡಿ ಎತ್ತರದ ಕಪ್ಪುಶಿಲೆಯ ವಿಗ್ರಹವಿದೆ. ಈ ಮಂದಿರ ಬದರಿನಾಥದಿಂದ 3 ಕಿ.ಮಿ. ದೂರದ ಮಾನಾ ಎಂಬ ಹಳ್ಳಿಯಲ್ಲಿದ್ದು ಇದು ಭಾರತದ ಉತ್ತರಗಡಿಭಾಗದ ಕೊನೆಯ ಗ್ರಾಮವಾಗಿದೆ.
ಗಣೇಶ ಗುಫಾ : ಮಹಾಭಾರತದ ರಚನೆಗೆ ಬ್ರಹ್ಮದೇವರು ಲಿಪಿಕಾರನಾಗಿ ಸೂಚಿಸಿದಂತೆ ಗಣೇಶನು ವ್ಯಾಸಪ್ರಣೀತ ಮಹಾಭಾರತ ಮಹಾಕಾವ್ಯವನ್ನು ಲಿಪಿಬದ್ದಗೊಳಿಸಿದನು. ಈ ಕಾವ್ಯವನ್ನು ಬರೆಯುವಾಗ ಗಣೆಶನು ವ್ಯಾಸನಿಗೆ ಒಂದು ಶರತ್ತನ್ನು ವಿಧಿಸಿದನು. ಅದರಂತೆ ಈ ಕಾವ್ಯವನ್ನು ತಡೆರಹಿತವಾಗಿ ಹೇಳಬೇಕು ಎಂಬುದಾಗಿ ಸೂಚಿಸಿದನು. ಅದಕ್ಕೆ ಪ್ರತಿಯಾಗಿ ವೇದವ್ಯಾಸನು ತಾನು ಹೇಳುವದನ್ನು ಅಥರ್ೆಸದೆ ಬರೆಯಬಾರದು ಎಂಬುದಾಗಿ ಪ್ರತಿ ಶರತ್ತನ್ನುಒಡ್ಡಿದನು. ಈ ಸ್ಥಳವು ಮಾನಾದಲ್ಲಿದೆ.
ಭೀಮಪೂಲ : ದ್ವಾಪರಯುಗದಲ್ಲಿ ಕುರುಕ್ಷೇತ್ರದಲ್ಲಿ ಮಹಾಭಾರತದ ಯುದ್ದದ ನಂತರ ಕೆಲಕಾಲ ರಾಜ್ಯಭಾರಮಾಡಿದ ಪಾಂಡವರು ದ್ರೌಪದಿ ಸಹಿತವಾಗಿ ಸ್ವರ್ಗಾರೋಹಣಕ್ಕೆ ಉಪಕ್ರಮಿಸುತ್ತಾರೆ. ಬದರಿನಾಥದ ನಂತರ ಹಿಮಾಲಯದ ಹಾದಿಯಲ್ಲಿ ಸಾಗುವಾಗ ಸರಸ್ವತಿನದಿಯನ್ನು ದಾಟಲು ಶತಗಜತ್ರಾಣಿಯಾದ ಭೀಮಸೇನನು ಒಂದು ಹೆಬ್ಬಂಡೆಯನ್ನು ನದಿಗೆ ಅಡ್ಡವಾಗಿಟ್ಟು ನದಿಯನ್ನು ದಾಟಿದರು. ಈ ಬಂಡೆಯು ಭೀಮಪೂಲ ಎಂದು ಪ್ರಸಿದ್ಧಿ ಪಡೆದಿದೆ. ಇದು ಮಾನಾಗ್ರಾಮದಲ್ಲಿದೆ.
ಉರ್ವಶಿಮಂದಿರ : ಬದರಿಯಲ್ಲಿ ಅವತರಿಸಿದ ನರನಾರಾಯಣರು ಎರಡು ಪರ್ವತಗಳಲ್ಲಿ ತಪಸ್ಸನ್ನಾಚರಿಸುತಿದ್ದರು. ಆಗ ಇವರಾರೆಂದು ತಿಳಿಯದ ಇಂದ್ರನು ಇವರ ತಪಸ್ಸ್ಸಿನಿಂದ ಹೆದರಿ ಅವರ ತಪಸ್ಸನ್ನು ಭಂಗಗೊಳಿಸಲು ಸ್ವರ್ಗದ ಅಪ್ಸರೆಯರನ್ನು ಕಳಿಸಿದನು. ಇದರಿಂದ ಕ್ರುದ್ಧನಾದ ಶ್ರೀಮನ್ನಾರಾಯಣನು ತನ್ನ ಉರುಪ್ರದೇಶವನ್ನು ಸ್ಪರ್ಶಿಸಲು ಅಲ್ಲಿಂದ ಅಪ್ಸರೆಯರಿಗಿಂತ ಚೆಲುವೆಯಾದ ಸ್ತ್ರಿಯೊಬ್ಬಳು ಉದ್ಭವಿಸಿದಳು. ಅವಳು ಊರುಪ್ರದೇಶದಿಂದ ಜನಿಸಿದವಳಾದ್ದರಿಂದ ಉರ್ವಶಿಯೆಂದೆ ಖ್ಯಾತಳಾದಳು. ನಂತರ ನಿಜವರಿತ ಇಂದ್ರನು ಕ್ಷಮೆಯಾಚಿಸಲು ಶ್ರೀಮನ್ನಾರಾಯಣನು ಉರ್ವಶಿಯನ್ನು ದೇವೆಂದ್ರನಿಗೆ ನೀಡಿದನು. ಈ ಮಂದಿರ ನಮ್ಮ ಮಠ ಮುಂಭಾಗದಿಂದ ಕಾಣುತ್ತಿದ್ದು ಒಂದು ಕಿ.ಮಿ ದೂರದ ಬಾಮಣಿಗ್ರಾಮದಲ್ಲಿದೆ.
ಅಗ್ನಿತೀರ್ಥ (ತಪ್ತಕುಂಡ) : ಅಗ್ನಿದೇವನು ಇಲ್ಲಿ ತಪನ್ನಾಚರಿಸಿ ಶ್ರೀಮನ್ನಾರಾಯಣನನ್ನು ಸಾಕ್ಷಾತ್ಕರಿಕೊಂಡಿದ್ದರಿಂದ ಇದು ಅಗ್ನಿತೀರ್ಥವೆಂದು ನೀರು ಬಿಸಿಯಾಗಿರುವದರಿಂದ ತಪ್ತಕುಂಡವೆಂದೂ ಪ್ರಸಿದ್ಧಿಗೊಂಡಿದೆ, ವರ್ಷದ ಸರ್ವಋತುವಿನಲ್ಲಿಯೂ ಬಿಸಿನೀರು ಲಭ್ಯವಿರುವದರಿಂದ ಯಾತ್ರಿಕರು ಬದರಿನಾಥಕ್ಕೆ ತಲುಪಿದನಂತರ ಇಲ್ಲಿ ತೀರ್ಥಸ್ನಾನ ಪೂರೈಸಿ ನವಚೈತನ್ಯ ಪಡೆಯುತ್ತಾರೆ. ದೇವಸ್ಥಾನದ ಕೆಳಭಾಗದಿಂದ ಹೊರಚಿಮ್ಮುವ ಈ ನೈಸಗರ್ಿಕ ಬಿಸಿನೀರಿನಬುಗ್ಗೆ ಸ್ವಲ್ಪಗಂಧಕದವಾಸನೆಯನ್ನು ಹೊಂದಿದ್ದು ಕೆಲವರಿಗೆ ಈ ನೀರಿನಸ್ನಾನ ಸ್ವಲ್ಪ ಅಲಜರ್ಿ ಎನಿಸಿದರೂ ಹಿಮಾಲಯದ ಹಿಮಾಚ್ಛಾದಿತ ಪ್ರದೇಶದಲ್ಲಿ ಶೀತವಾತಾವರಣಕ್ಕೆ ಇದೊಂದು ವರವೇಸರಿ. ಪುರುಷ ಮತ್ತು ಸ್ತ್ರಿಯರಿಗೆ ಪ್ರತ್ಯೇಕ ಸ್ನಾನದ ವ್ಯವಸ್ಥೆ ಇದ್ದು ಹೆಚ್ಚಿನವರು ಇಲ್ಲಿ ತೀರ್ಥಸ್ನಾನಮಾಡುತ್ತಾರೆ. ಈ ಕುಂಡ ದೇವಸ್ಥಾನಕ್ಕೆ ಹೋಗುವ ಮೆಟ್ಟಿಲುಗಳ ಬಲಭಾಗದಲ್ಲಿದೆ.
ಬ್ರಹ್ಮಕಪಾಲ : ಬದರಿನಾಥಕ್ಕೆ ಬರುವ ಯಾತ್ರಿಕರಿಗೆ ಬದರಿನಾಥನ ದರ್ಶನದ ನಂತರ ಮುಖ್ಯಕಾರ್ಯವೆಂದರೆ ಪೀತೃಕಾರ್ಯ. ತಮ್ಮ ಗತಪಿತೃರಿಗೆ ಪಿಂಡಪ್ರದಾನಮಾಡುವದು. ಇಲ್ಲಿನ ಪಿಂಡಪ್ರದಾನಕ್ಕೆ ಪಿತೃಗಣವು ಕಾಯುತ್ತಿದ್ದು ತಮ್ಮ ವಂಶದಲ್ಲಿ ಯಾರಾದರೊಬ್ಬರು ಬಂದು ತಮಗೆ ಪಿಂಡಪ್ರದಾನ, ತರ್ಪಣಾದಿಗಳನ್ನು ನೀಡಲಿ ಎಂದು ಅಪೇಕ್ಷಿಸುತ್ತಾರೆ. ಇಲ್ಲಿ ಮಾಡಿದ ಪಿಂಡದಾನವು ಅಕ್ಷಯಫಲ ನೀಡುವದರಿಂದ ಇನ್ನು ಮುಂದೆ ತಮ್ಮ ಮಾತಾಪಿತೃಗಳಿಗೆ ಹೊರತುಪಡಿಸಿ ಇತರರಿಗೆ ಪಿಂಡದಾನ ಮಾಡಬೇಕೆಂದಿಲ್ಲ. ಬ್ರಹ್ಮಕಪಾಲದ ಶಿಲೆಗೆ ಪಿಂಡವನ್ನು ಸ್ಪಶರ್ಿಸಿ ಅಲಕನಂದಾ ನದಿಯಲ್ಲಿ ವಿಸರ್ಜಿಸಬೇಕು.
ಮುಚುಕುಂದಗುಫಾ : ದೇವದಾನವ ಯುದ್ಧದಲ್ಲಿ ದೇವತೆಗಳಿಗೆ ಸಹಾಯಮಾಡಿ ಅವರ ಜಯದಿಂದ ಸಂತುಷ್ಟನಾದ ಇಂದ್ರನು ಅವನ ಇಚ್ಚೆಯಂತೆ ಶಾರೀರಿಕ ಶ್ರಮದಿಂದ ವಿಶ್ರಾಂತಿ ಪಡೆಯಲು ದೀರ್ಘಕಾಲದ ನಿದ್ರೆಯವರನೀಡಿ ತನ್ನ ನಿದ್ರೆಗೆ ಭಂಗತರುವವರು ಮೃತರಾಗುವಂತೆ ವರಪಡೆದನು. ಈ ಗುಟ್ಟನ್ನು ಅರಿತಿದ್ದ ಶ್ರೀಕೃಷ್ಣನು ಕಾಲಯವನನಿಗೆ ಹೆದರಿದಂತೆ ನಟಿಸಿ ರಣರಂಗದಿಂದ ಓಡಿಹೋಗಿ ರಣಛೋಡ ನೆಂಬ ಅಪಕೀರ್ತಿಯನ್ನೂ ಪಡೆದರೂ ಮುಚುಕುಂದ ಗುಹೆಯಲ್ಲಿ ಅವನನ್ನು ಕಾಲಯವನನಿಂದ ನಿದ್ರಾಭಂಗವಾಗುವಂತೆ ಮಾಡಿ ಕಾಲಯವನನಿಂದ ಮುಕ್ತಿಪಡೆದು ಮುಚುಕುಂದವರದನೆಂದು ಖ್ಯಾತನಾದನು. ನಂತರ ಈ ಮುಚುಕುಂದನು ಬದರಿನಾಥದ ಗುಹೆಯಲ್ಲಿ ತಪಸ್ಸುಮಾಡಿ ಮೋಕ್ಷಪಡೆದನು. ಇದು ಬದರಿನಾಥದಿಂದ 6 ಕಿ.ಮಿ ದೂರದಲ್ಲಿದೆ.
ಬದರಿನಾಥದಲ್ಲಿ ಪ್ರಮುಖವಾಗಿ ದರ್ಶನೀಯ ಸ್ಥಳಗಳಲ್ಲಿ ಪಂಚಕುಂಡ, ಪಂಚಶಿಲೆಗಳು, ಸ್ವರ್ಗಾರೋಹಣದ ಮಾರ್ಗ, ವಸುಧಾರಾ, ಸಹಸ್ರಧಾರ ಇತ್ಯಾದಿ ಅನೇಕ ಸ್ಥಳಗಳಿದ್ದು ಇದರಲ್ಲಿ ಕೆಲವೊಂದು ಸಾಮಾನ್ಯರ ಕೈಗೆ ಎಟುಕುವದಿಲ್ಲ.
ಬದರಿನಾಥದಲ್ಲಿನ ಜನಜೀವನ ಮತ್ತು ಹವಾಮಾನ : ಬದರಿನಾಥ ಹಿಮಾಲಯ ಶ್ರೇಣಿಯಲ್ಲಿನ ಒಂದುಪರ್ವತ ಪ್ರದೇಶ, ಸಮುದ್ರಪಾತಳಿಯಿಂದ 3133 ಮೀಟರ(10279 ಫೂಟ) ಎತ್ತರದಲ್ಲಿದ್ದು ಮೇ ತಿಂಗಳಿನಿಂದ ಅಕ್ಟೋಬರ ತನಕ ವರ್ಷದ ಆರು ತಿಂಗಳು ಜನಸಂಚಾರವಿದ್ದು ಉಳಿದ ಸಮಯದಲ್ಲಿ ಹಿಮಾಚ್ಛಾದಿತವಾಗಿದ್ದು ಚೀನಾದ ಗಡಿಭಾಗವಾಗಿರುವದರಿಂದ ಸೈನಿಕರ ಕ್ಯಾಂಪಿರುತ್ತದೆ. ಈ ಆರು ತಿಂಗಳು ಪಕ್ಕದ ಹಳ್ಳಿಗಳ ಜನರು, ಟಿಬೇಟಿಯನ್ನರು ತಮ್ಮ ಹೊಟ್ಟೆಪಾಡಿಗಾಗಿ ವಿವಿಧ ಕಾಮಗಾರಿಯನ್ನರಸಿ ಬರುತ್ತಾರೆ. ಹೋಟೆಲ, ವಸತಿಗೃಹ, ಉಣ್ಣೆಬಟ್ಟೆಮಾರಾಟ, ಫೋಟೊಗ್ರಾಫಿ, ಗೈಡ್ ಹಾಗೂ ಇತರ ಸಣ್ಣಪುಟ್ಟ ವ್ಯಾಪಾರ, ಸ್ಥಳಿಯರಿಗೆ ಹೊಲದಲ್ಲಿ, ಕಾಲಿಪ್ಲಾವರ, ಕ್ಯಾಬೀಜ, ಬಟಾಟೆ, ಮೂಲಂಗಿ, ಹಸಿರು ಬಟಾಣಿ ಮುಂತಾದ ವ್ಯವಸಾಯ ಹೈನುಗಾರಿಕೆಯಿಂದ ಜೀವನೋಪಾಯ ಮಾಡಿಕೊಂಡಿರುತ್ತಾರೆ. ಹೈನುಗಾರಿಕೆಯಿಂದ ಬರುವ ಶೆಗಣಿಯ ಸಾವಯವ ಗೊಬ್ಬರ ಉಪಯೋಗಿಸುವದರಿಂದ ಇಲ್ಲಿಯ ತರಕಾರಿ ಹೆಚ್ಚು ಪೌಷ್ಟಿಕ ಮತ್ತು ರುಚಿಕರವಾಗಿದೆ. ಶರದ್ ಋತುವಿನ ನಂತರದ ಆರು ತಿಂಗಳು ಜೋಶಿಮಠದ ಕೆಳಭಾಗದ ಪರಿಸರದ ವಿವಿಧ ಊರಿನಲ್ಲಿ ವಾಸ್ತವ್ಯ ಮಾಡಿಕೊಂಡಿರುತ್ತಾರೆ. ಬೇಸಿಗೆ ಪ್ರಾರಂಭವಾಗಿ ಪ್ರವಾಸಿಗಳು ಆಗಮನವಾಗುತ್ತಿದ್ದಂತೆ ತಮ್ಮ ಜೀವನೋಪಾಯವನ್ನರಸಿ ಇಲ್ಲಿ ಬರುತ್ತಾರೆ. ವಷರ್ಾಋತುವಿನಲ್ಲಿ ನಮ್ಮ ಕರಾವಳಿ, ಮಲೆನಾಡಿಗೆ ಹೊಲಿಸಿದರೆ ಅದು ಮಳೆಯೆ ಅಲ್ಲ. ಆದರೂ ಈ ಮಳೆಗೆ ಅಲ್ಲಿಯ ಭೂಕುಸಿತದಿಂದ ಜನಜೀವನ ಸ್ತಬ್ದವಾಗುತ್ತದೆ. ಶುಷ್ಕವಾತಾವರಣ, 5 ರಿಂದ 15 ಡಿಗ್ರಿ ಶೀತಹವಾಮಾನ, ಬಿಸಿಲು ಬಂದಾಗ ಸ್ವಲ್ಪ ಬೆಚ್ಚಗೆ ಹಿತವೆನಿಸುವ ಈ ಪರ್ವತ ಪ್ರದೇಶದ ಶುದ್ಧ ಹವಾಮಾನದಲ್ಲಿ ಹಿತಕರವೆನಿಸಿದರು ಆಮ್ಲಜನಕದ ಪ್ರಮಾಣದಲ್ಲಿ ಅಧರ್ಾಂಶವಿರುವದರಿಂದ ಪ್ರವಾಸಿಗರ ಚಟುವಟಿಕೆ ಸಾವಧಾನವಾಗುತ್ತದೆ. ಆದರೆ ಇದೇ ವಾತಾವರಣದಲ್ಲಿ ಹುಟ್ಟಿ ಬೆಳೆದ ಈ ಜನರಿಗೆ ಅದೇನು ಕೊರತೆಯೆನಿಸುವದಿಲ್ಲ. ಪಿಟ್ಟು ಸವರ್ಿಸ ಬುಟ್ಟಿಯಲ್ಲಿ ಜನರಿಗೆ ಮತ್ತು ಇತರ ಸಾಮಾನು ಸರಂಜಾಮು ಹೊತ್ತು ಸಾಗಿಸುವದು ಇಲ್ಲಿಯ ಜನರಿಗೆ ನಿತ್ಯ ಕಾಯಕ ಮತ್ತು ಜೀವನಾಧಾರವಾಗಿದೆ.
ಈ ಹವಾಮಾನದ ಕುರಿತು ಶ್ರೀಗಳು ಬದರಿಗೆ ಬಂದ ಯಾತ್ರಿಗಳಿಗೆ ಪೂರ್ವಸೂಚನೆ ನೀಡುತ್ತಾರೆ. ಬೆಚ್ಚಗಿನ ಉಡುಪು ಧರಿಸಬೇಕು, ತಲೆಯನ್ನು ಶಾಲು, ಟೊಪ್ಪಿಗೆ ಇತ್ಯಾದಿಯಿಂದ ಮುಚ್ಚಿಕೊಂಡಿರಬೇಕು, ಆಮ್ಲಜನಕದ ಪ್ರಮಾಣ ಕಡಿಮೆಯಿರುವದರಿಂದ ಸಾವಧಾನವಾಗಿ ನಡೆಯಬೇಕು. ಮೆಟ್ಟಿಲು ಏರಿಳಿಯುವಾಗ, ಏರು ಪ್ರದೇಶಗಳಲ್ಲಿ ನಡೆಯುವಾಗ ನಿಧಾನ ಹೆಜ್ಜೆಹಾಕಿ ನಡೆಯಬೇಕು, ಏದುಸಿರು ಬರುತ್ತಿದ್ದಂತೆ ನಿಂತು ದೀರ್ಘಉಸಿರು ತೆಗೆದುಕೊಳ್ಳಬೇಕು. ಹೃದಯದ ತೊಂದರೆ, ಉಸಿರಾಟದ ತೊಂದರೆ ಇರುವವರು ಬರದಿರುವದು ಕ್ಷೇಮವೆಂದು ಈ ಮೊದಲೆ ಸೂಚನೆ ನೀಡಲಾಗಿತ್ತು.
ಬದರಿನಾಥದಲ್ಲಿ ನಡೆಯುವ ಹಬ್ಬಹರಿದಿನಗಳು : ಬದರಿನಾಥ ದೇವಾಲಯ ವೈಶಾಖಮಾಸದ ಅಕ್ಷಯತೃತೀ ಯಾದ ಸುಮಾರಿಗೆ ದರ್ಶನಕ್ಕೆ ಮುಕ್ತವಾಗಿ ದೀಪಾವಳಿಯ ಸುಮಾರಿಗೆ ಉತ್ಸವಮೂತರ್ಿಯು ಮಿಲಿಟರಿ ಗೌರವದೊಂದಿಗೆ ಜ್ಯೋತಿರ್ಮಠಕ್ಕೆ ಬರುವದರೊಂದಿಗೆ ವರ್ಷದ ಆರುತಿಂಗಳುಮಾತ್ರ ತೆರೆದಿದ್ದು ಉಳಿದ ಸಮಯ ಹಿಮಾಚ್ಚಾದಿತವಾಗಿರುತ್ತದೆ. ತೆರೆದಿರುವ ಈ ಆರು ತಿಂಗಳಿನಲ್ಲಿ ಬದರಿನಾಥ ಚಟುವಟಿಕೆಯಿಂದ ಕೂಡಿರುತ್ತದೆ. ದೇವಾಲಯ ತೆರೆಯುವಾಗ ಹಿಂದೆ ಮುಚ್ಚುವಸಮಯದಲ್ಲಿ ದೇವರಿಗೆ ಅಲಂಕರಿಸಿದ ಹೂ ಬಾಡದೆ ಇರುವದು, ಅಂದು ಹಚ್ಚಿದ ದೀಪ ಉರಿಯುತ್ತಿರುವದನ್ನು ನೋಡಲು ಬ್ರಾಹ್ಮಿಮೂಹೂರ್ತದಲ್ಲಿ ಚಳಿಯನ್ನೂ ಲೆಕ್ಕಿಸದೆ ಅನೇಕ ಭಕ್ತರು ಇಲ್ಲಿ ಸೇರುತ್ತಾರೆ. ಇದೇ ಕ್ರಮದಲ್ಲಿ ಯಮುನೋತ್ರಿ, ಗಂಗೋತ್ರಿ, ಕೇದಾರನಾಥಗಳಲ್ಲೂ ನಡೆಯುತ್ತದೆ. ಆ ಸಮಯದಲ್ಲಿ ಹಿಮಾಲಯದ ವಾತಾವರಣ ಸ್ವಚ್ಚವಾಗಿರುವದರಿಂದ ಡೆಹರಾಡೂನನಿಂದ ಈ ಚಾರಧಾಮಗಳಿಗೆ ಪ್ರಯಾಣಿಸಲು ಹೆಲಿಕಾಪ್ಟರ ಸೌಲಭ್ಯವಿರುತ್ತದೆ.
ಕೃಷ್ಣಜನ್ಮಾಷ್ಟಮಿ : ಬದರಿಯ ದೇವಸ್ಥಾನದಲ್ಲಿ ಕೃಷ್ಣಜನ್ಮಾಷ್ಟಮಿ ಉತ್ಸವವನ್ನು ಅದ್ದೂರಿಯಾಗಿ ಆಚರಿಸುತ್ತಾರೆ, ಉತ್ತರಾಖಂಡದ ಅಲ್ಲದ ಪರರಾಜ್ಯಗಳಿಂದ ಅನೇಕ ಜನರು ಈ ಉತ್ಸವ ನೋಡಲು ಬರುತ್ತಾರೆ. ಉತ್ತರಾಖಂಡದ ಅಧಿದೇವತೆಯಾಗಿರುವ ಬದರಿನಾಥನನ್ನು ಸಂದಶರ್ಿಸಲು ಬದರಿಯಪರಿಸರದ ಇತರ ದೇವಮಂದಿರ ದೇವದೇವತೆಗಳು ವಾದ್ಯದೊಂದಿಗೆ ಪಲ್ಲಕ್ಕಿಯಲ್ಲಿ ಬಂದು ದೇವದರ್ಶನ ಪಡೆಯುವದು ಇಲ್ಲಿಯವಾಡಿಕೆ. ಹರಿಸವರ್ೊತ್ತಮ ತತ್ವ ಇಲ್ಲಿ ಜನಜನಿತ. ನಮ್ಮ ಮಠದ ಮುಂದಿರುವ ಬಾಮಣಿ(ಬ್ರಾಹ್ಮಣರ)ಗ್ರಾಮದಲ್ಲಿಯ ಉರ್ವಶಿಮಂದಿರದಲ್ಲಿ ವಿಶೇಷ ಸೇವೆನಡೆಯುತ್ತದೆ. ಅಲ್ಲಿಯ ಸ್ಥಾನಿಕ ಬ್ರಾಹ್ಮಣರು ಕೃಷ್ಣಾವತಾರದ ವಿವಿಧ ರೂಪಕಗಳನ್ನು ಪ್ರದರ್ಶಿಸುತ್ತಾರೆ. ಈ ವರ್ಷ ಕೃಷ್ಣ ಕುಚೇಲರ ಮಿಲನ, ವಸುದೇವನು ಕೃಷ್ಣನನ್ನು ಹೊತ್ತು ಯಮುನಾನದಿಯನ್ನು ದಾಟುವ ದೃಶ್ಯಾವಳಿಯನ್ನು ಮಾಡುತ್ತ ನಂದಗ್ರಾಮದ ಜನರಪೋಷಾಕು ಧರಿಸಿ, ಬಾಲಕೃಷ್ಣನವೇಷಧಾರಿಗೆ ಪಲ್ಲಕಿಯಲ್ಲಿ ಕುಳ್ಳಿರಿಸಿ ಬದರಿನಾರಾಯಣ ಮಂದಿರ ಸಂದಶರ್ಿಸುತ್ತಾರೆ. ಈ ದಾರಿಯಲ್ಲಿ ಬರುವ ಜನರಿಗೆ ಸಿಹಿ, ಹಣ್ಣು, ಸಿಹಿಮೊಸರು ನೀಡಿ ಉತ್ಸವವನ್ನು ಅದ್ದೂರಿಯಾಗಿ ಆಚರಿಸುತ್ತಾರೆ.
ಗಣೇಶೋತ್ಸವ : ಈ ಹಿಂದೆ 1989ರಲ್ಲಿ ಬದರಿನಾಥದಲ್ಲಿಯ ನಮ್ಮಮಠದಲ್ಲಿಮಾತ್ರ ಗಣೇಶೋತ್ಸವ ನಡೆಯುತ್ತಿತ್ತು. 2019 ರಲ್ಲಿ ಸ್ಥಾನಿಕ ಫಂಡಾಜನರು ಮಂದಿರ ಸಮೀಪದಲ್ಲಿ ಗಣೇಶೋತ್ಸವವನು ಐದುದಿನಕಾಲ ಆಚರಿಸಿದರು. ಇಲ್ಲಿಯ ಇಂಡೊಟಿಬೇಟ ಸೈನಿಕರು ಗಣೇಶೋತ್ಸವವನು ಆಚರಿಸಿ ವಿಸರ್ಜನೆ ಪೂರ್ವದಲ್ಲಿ ಬದರಿನಾಥದ ಮುಖ್ಯರಸ್ತೆೆಗಳಲ್ಲಿ ಮೆರವಣಿಗೆಯಲ್ಲಿ ಸಾಗಿರುವದು ವಿಶೇಷವಾಗಿತ್ತು. ನಮ್ಮ ಮಠದಲ್ಲಿನ ಗಣೇಶಪ್ರತಿಮೆ
ನಂದಾದೇವಿ ಜಥ : ನಂದಾದೇವಿ ಪರ್ವತರಾಜನ ಪುತ್ರಿ ಶಿವನನ್ನು ವಿವಾಹವಾಗಿದ್ದ ಕೇದಾರನಾಥ ಮಂದಿರದ ಮಾರ್ಗದಲಿರುವ ಈ ಸ್ಥಳ ತ್ರಿಯುಗಿನಾರಾಯಣ ಮಂದಿರವೆಂದೆ ಪ್ರಸಿದ್ಧಗೊಂಡಿದೆ. ನಂದಾದೇವಿಯನ್ನು ತವರಿಗೆ ಕರೆತಂದು ಉಪಚರಿಸುವದೆ ಈ ಉತ್ಸವದ ಸಂಭೃಮ. ಭಾದ್ರಪದ ಶುಕ್ಲ ಅಷ್ಟಮಿಯಂದು ಅವಳನ್ನು ನೀಲಕಂಠ ಪರ್ವತದ ಪಾತಳಿಯಿಂದ ಈ ಮಂದಿರಕ್ಕೆ ಕರೆತರುತ್ತಾರೆ. ಈ ಉತ್ಸವಕ್ಕೆ ಪೂರ್ವಭಾವಿಯಾಗಿ ಹಿಮಾಲಯ ಪರ್ವತಗಳಲ್ಲಿ ವರ್ಷಕ್ಕೆ ಒಂದುಬಾರಿ ಮಾತ್ರ ಅರಳುವ ತಿಳಿ ಹಳದಿಮಿಶ್ರಿತಹಸಿರು ಬಣ್ಣದ ಬ್ರಹ್ಮಕಮಲದಲ್ಲಿ ಬೃಮರರೂಪದಲ್ಲಿ ಇರುತ್ತಾಳೆಂದು ಅವರ ನಂಬಿಕೆ. ಮೊದಲಿನದಿನ ಎಳೆಂಟು ಜನರತಂಡ ದೇವಸ್ಥಾನದ ಹಿಂಭಾಗದಲ್ಲಿರುವ ನೀಲಕಂಠ ಪರ್ವತದ ತಳಭಾಗದತನಕ ಏರಿ ಕೊರೆಯುವ ಚಳಿಯಲ್ಲಿ ಅಲ್ಲಿ ವಾಸ್ತವ್ಯಮಾಡಿ ಬ್ರಾಹ್ಮಿಮುಹೂರ್ತದಲ್ಲಿ ಅರಳುವ ಈ ಬ್ರಹ್ಮಕಮಲವನ್ನು ಸಂಗ್ರಹಿಸುತ್ತಾರೆ. ಸುಮಾರು ನಾಲ್ಕುದೊಡ್ಡಬುಟ್ಟಿಗಳಷ್ಟು ಈ ಹೂವನ್ನು ಸಂಗ್ರಹಿಸಿ ಸಾಯಂಕಾಲ ಮಂದಿರದ ಸಮೀಪ ಬರುವಾಗ ವಾದ್ಯಗೀತಾದಿಗಳಿಂದ ಇವರನ್ನು ಬರಮಾಡಿಕೊಳ್ಳುತ್ತಾರೆ. ಮರುದಿನ ಈ ಹೂವನ್ನು ದೇವಿಗೆ ಸಮಪರ್ಿಸಿ ನಂತರ ಭಕ್ತರಿಗೆ ಹಂಚುತ್ತಾರೆ. ಸಾಯಂಕಾಲ ಉತ್ಸವಕ್ಕೆ ಬಂದ ಭಕ್ತಾದಿಗಳಿಗೆ ಜಿಲೇಬಿ, ಪ್ಲಾವರಬಜೆ ಚಹಾ ನೀಡಿ ಸಂಭೃಮಿಸುತ್ತಾರೆ. ಈ ರೀತಿಯಾಗಿ ಎರಡುದಿವಸ ಅವಳನ್ನು ತವರಿನಲ್ಲಿ ಸತ್ಕರಿಸಿ ಪತಿಗ್ರಹಕ್ಕೆ ಬೀಳ್ಕೊಡುತ್ತಾರೆ.
ವಾಮನ ದ್ವಾದಶಿ : ಭಾದ್ರಪದ ಶುಕ್ಲದ್ವಾದಶಿ ಬದರಿನಾಥದಲ್ಲಿ ಆಚರಿಸುವ ಉತ್ಸವಗಳಲ್ಲಿ ವಿಶೇಷತೆ ಪಡೆದಿದೆ. ಇಂದು ಶ್ರೀಮನ್ನಾರಾಯಣನು ವಾಮನನಾಗಿ ಜನ್ಮತಳೆದನು. ಮಾತಾಮೂತರ್ಿ ಮಂದಿರವಿರುವ ಈ ಪ್ರದೇಶ ಧರ್ಮಕ್ಷೇತ್ರವೆಂದೆ ಪ್ರಸಿದ್ಧಿಪಡೆದಿದೆ. ಅಂದು ಬೆಳಿಗ್ಗೆ ಸುಮಾರು 8:0 ಘಂಟೆಗೆ ದೇವರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ 3.0 ಕಿ.ಮಿ. ದೂರದಲ್ಲಿಸುವ ಈ ಮಾತಾಮೂರ್ತಿ ಮಂದಿರಕ್ಕೆ ಬರುತ್ತಾರೆ. ಅಂದು ಶ್ರೀ ಬದರಿನಾರಾಯಣನು ತನ್ನ ತಾಯಿಯಾದ ಮೂರ್ತಿಯೊಂದಿಗೆ ನೈವೇದ್ಯ ಸ್ವೀಕರಿಸುತ್ತಾನೆ. ಅಂದಿನ ಮಧ್ಯಾನದ ಪೂಜೆ ನೈವೇದ್ಯ ಈ ಮಂದಿರದಲ್ಲಿ ಆಚರಿಸುವದು ವಿಶೇಷವಾಗಿದೆ. ಈ ಸಮಯದಲ್ಲಿ ಬದರಿನಾರಾಯಣ ಮಂದಿರ ಮುಚ್ಚಲ್ಪಡುತ್ತದೆ. ಮಂದಿರದ ಅರ್ಚಕರು ಮತ್ತು ಪ್ರಧಾನರನ್ನು ಮಿಲಿಟರಿ ಕುದುರೆಯಮೇಲೆ ಕುಳ್ಳರಿಸಿ ಸ್ವರ್ಣದಂಡದ ಗೌರವದೊಂದಿಗೆ ಇಲ್ಲಿ ಕರೆತರುತ್ತಾರೆ. ದೇವಸ್ಥಾನದಿಂದ ಈ ಮಂದಿರದ ತನಕ ಉತ್ತಮ ದಾರಿಯಿದ್ದು ಜನರು ಇಲ್ಲಿ ಕಾಲ್ನಡಿಗೆಯಲ್ಲಿ ಬರುತ್ತಾರೆ.
ಚಾತುರ್ಮಾಸದ ಅವಧಿಯಲ್ಲಿ ಮತ್ತೊಂದು ವಿಶೇಷತೆ ಎಂದರೆ ನಮ್ಮ ಮಠದ ಮುಂಭಾಗದಲ್ಲಿ ಕಾಣುವ ಮೇರು (ನೀಲಕಂಠ) ಪರ್ವತ ಇಂದು ವಾಮನದ್ವಾದಶಿಯ ಸೂರ್ಯೋದಯಕ್ಕೆ ಸ್ವರ್ಣಶಿಖರವಾಗಿ ಕಂಗೊಳಿಸಿದ್ದು ಶ್ರೀಮನ್ನಾರಾಯಣನು ಭೂಮಿಗೆ ಅವತರಿಸ್ಸಿದ್ದನ್ನು ಭಕ್ತಜನರಿಗೆ ನೆನೆಪಿಸುವಂತಿತ್ತು. ಅಂದು ಕಂಡ ದೃಶ್ಯ ಇತರಯಾವದಿನವೂ ಕಾಣದಿರವದು ಈ ಪವಿತ್ರದಿನವನ್ನು ಸೂಚಿಸುವಂತಿತ್ತ್ತು.
ವಾಮನದ್ವಾದಶಿ ಉತ್ಸವಕ್ಕೆ ಮಾನಾಗ್ರಾಮಕ್ಕೆ ಬರುವ ಭಕ್ತಾದಿಗಳಿಗೆ ಮಾನಾಗ್ರಾಮದ ಸೈನಿಕರಿಂದ ಪ್ರಸಾದರೂಪದಲ್ಲಿ ಪುರಿ ಮತ್ತು ಚನಾಮಸಾಲಾ ವಿತರಿಸಲಾಯಿತು. ಸ್ವತಃ ಸೈನಿಕರೆ ಊಟದ ತಯಾರಿ ಮತ್ತು ಬಡಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಶರದ್ ಋತುವಿನಕಾಲದಲ್ಲಿ ದೇವರು ಜ್ಯೋತಿರ್ಮಠಕ್ಕೆ ಕರೆದೊಯ್ಯುವಾಗ ಮತ್ತು ಮರಳಿ ಬದರಿನಾಥಕ್ಕೆ ತರುವಾಗ ಸೈನಿಕಗೌರವಗಳಿಂದ ತರುವದು ಇಲ್ಲಿನ ವಿಶೇಷತೆ.
ಬದರಿಯಲ್ಲಿನ ವೈಷ್ಣವ ಮಠಗಳು :
1. ಜೀವೋತ್ತಮಠ (ಶ್ರೀ ಗೋಕರ್ಣಮಠದ ಶಾಖಾಮಠ)
2. ಶ್ರೀ ಕಾಶಿಮಠದ ಶಾಖಾಮಠ
3. ಅನಂತ ಮಠ (ಪೇಜಾವರ ಮಠದ ಶಾಖಾಮಠ)
4. ಉತ್ತರಾದಿಮಠದ ಶಾಖಾಮಠ
5. ರಾಘವೇಂದ್ರ ಸ್ವಾಮಿ ಮಠದ ಶಾಖಾಮಠ
ಇದಲ್ಲದೆ ಶ್ರೀರಾಮಾಜುನಾಚಾರ್ಯದ ಮಠ, ಜೈನರ ವಿವಿಧ ಪಂಥಗಳ ಮಠಗಳು ಇವೆ.
ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ
ಉಭಯ ಯತಿವರ್ಯರ 2019ರ ಚಾತುರ್ಮಾಸ
ದೇವಭೂಮಿ ಹಿಮಾಲಯದ ಬದರಿಕಾಶ್ರಮದಲ್ಲಿ
(ಪರಿಚಯ ಲೇಖನ)
ಲೇಖನ ಮತ್ತು ಫೊಟೊ : ಮಹೇಶ ನಾಯಕ, ಯಲ್ಲಾಪುರ